ಶಾಂತಿ ಕದಡಲು ಯತ್ನಿಸಿದವನ ಬಂಧನ

Published on

ತಿಪಟೂರು: ಕೋಮು ಪ್ರಚೋದನಕಾರಿ ಪೋಸ್ಟರ್​ ಮೂಲಕ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸಿದ ವ್ಯಕ್ತಿಯನ್ನು ನಗರಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ನಗರದ ಗಾಂಧೀನಗರ ನಿವಾಸಿ ಉಮರ್​ಫಾರುಕ್​ (41) ಬಂಧಿತ. ಈತ ಲಾರಿ ಚಾಲಕನಾಗಿದ್ದು, ಫೇಸ್​ಬುಕ್​ನಲ್ಲಿ ಹಿಂದು ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್​ಗಳನ್ನು ಹಾಕುವುದು, ಅನ್ಯ ಧರ್ಮಗಳ ಬಗ್ಗೆ ವಿರೋಧಿ ಗ್ರೂಪ್​ಗಳನ್ನು ರಚನೆ ಮಾಡುತ್ತಿರುವುದನ್ನು ಗಮನಿಸಿದ ನಗರಠಾಣೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net