ಶಾಂತಾನAದ ಸರಸ್ವತಿ ಆರಾಧನೆ ಆರಂಭ

ydg4
ಕೆಂಭಾವಿ ಸಮೀಪ ಕೂಡಲಗಿ ಗ್ರಾಮದಲ್ಲಿ ಭಾನುವಾರ ಸದ್ಗುರು ಶ್ರೀ ಶಾಂತಾನAದ ಸರಸ್ವತಿಗಳ ಉತ್ತರಾರಾಧನೆ ನಿಮಿತ್ತ ಹೋಮ ಸೇರಿ ವಿವಿಧ ಪೂಜಾ ಕೈಂಕರ್ಯ ಜರುಗಿದವು. ಶ್ರೀ ಉಮಾಕಾಂತ ಸಿದ್ಧರಾಜ ಮಹಾರಾಜ, ಶ್ರೀ ಮೃತ್ಯುಂಜಯ ಮಹಾರಾಜ, ಶ್ರೀ ಗಜಾನನ ಮಹಾರಾಜ, ಡಾ.ಚಂದ್ರಶೇಖರ ಇದ್ದರು.
Published on

ಕೆAಭಾವಿ: ಕೂಡಲಗಿ ಗ್ರಾಮದ ಬಾಬಾ ಮಹಾರಾಜ ಮಠದಲ್ಲಿ ಶ್ರೀ ಉಮಾಕಾಂತ ಸಿದ್ಧರಾಜ ಮಹಾರಾಜ ನೇತೃತ್ವದಲ್ಲಿ ಸದ್ಗುರು ಶ್ರೀ ಶಾಂತಾನAದ ಸರಸ್ವತಿ ಸ್ವಾಮಿಗಳ 91ನೇ ಆರಾಧನೆ ಭಾನುವಾರ ಆರಂಭಗೊAಡಿತು. ಸುಪ್ರಭಾತ, ವೇದಘೋಷ, ಕಾಕಡಾರತಿ ನಡೆಯಿತು. ಮೂರು ದಿನ ಸ್ವಯಂಭೂ ಸಿದ್ಧಿವಿನಾಯಕ ಹಾಗೂ ಅನ್ನಪೂರ್ಣ ದೇವಿಗೆ ಪಂಚಾಮೃತ ಅಭಿಷೇಕ, ಅರ್ಚನೆ, ವಿಶೇಷ ಪೂಜೆ, ಲೋಕಲ್ಯಾಣಾರ್ಥ ಕ್ಷಿಪ್ರ ಗಣಪತಿ ಹೋಮ, ಶ್ರೀ ಶಾಂತಾನAದರ ಭಾವಚಿತ್ರಕ್ಕೆ ಮಹಾಮಂಗಳಾರತಿ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಅಂಬಾಮಠದ ಶ್ರೀ ಬ್ರಹ್ಮಾನಂದ ಕನಕಗಿರಿ, ಶ್ರೀ ದೇವಿದಾಸ ಭಟ್ಟ ಕನಕಗಿರಿ, ಶ್ರೀ ಮೃತ್ಯುಂಜಯ ಮಹಾರಾಜ, ಶ್ರೀ ಗಜಾನನ ಮಹಾರಾಜ, ದಾವಣಗೆರೆ ವಿಶ್ವವಿದ್ಯಾಲಯ ಸಹ ಪ್ರಾಧ್ಯಾಪಕ ಡಾ.ಭೀಮಾಶಂಕರ ಜೋಷಿ, ಶ್ರೀಪಾದಭಟ್ಟ ಜೋಷಿ, ದತ್ತಂಭಟ್ಟ ಜೋಷಿ, ಗಿರೀಶ ಭಟ್ಟ ಜೋಷಿ, ತಿರುಮಲಾಚಾರ್ಯ ಜೋಷಿ, ಸಾತಪ್ಪ ಯಡ್ರಾಮಿ, ಶಾಂತಗೌಡ ಬಾನಾಳ, ಭೀಮಭಟ್ಟ ಜೋಷಿ, ಗಣೇಶ ಜಹಾಗಿರದಾರ, ಡಾ.ಚಂದ್ರಶೇಖರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net