ಶಾಂತಲಾ ಪಾಟೀಲ ಸಾಹಿತ್ಯ ಪುರಸ್ಕಾರಕ್ಕೆ ಆಯ್ಕೆ

13 Dwd 7 Channabasavanna C.
Published on

ಧಾರವಾಡ: ನಾಡೋಜ ಡಾ. ಪಾಟೀಲ ಪುಟ್ಟಪ್ಪ ಹಾಗೂ ಇಂದುಮತಿ ದಂಪತಿಯ ಪುತ್ರಿ ದಿ. ಶಾಂತಲಾ ಪಾಟೀಲ ಹೆಸರಿನಲ್ಲಿ ಅವರ ಮಗಳು ವಿಜಯಮಾಲಾ ಅವರು ಇರಿಸಿದ ದತ್ತಿ ಅಂಗವಾಗಿ ಪ್ರತಿವರ್ಷ ಕೊಡಮಾಡುವ `ಶಾಂತಲಾ ಪಾಟೀಲ ಸಾಹಿತ್ಯ ಪುರಸ್ಕಾರ' ಸಾಹಿತ್ಯಿಕ ಪ್ರಶಸ್ತಿಗೆ ಸಾಹಿತಿಗಳನ್ನು ಕರ್ನಾಟಕ ವಿದ್ಯಾವರ್ಧಕ ಸಂಘ ಆಯ್ಕೆ ಮಾಡಿದೆ. ೨೦೨೦ನೇ ಸಾಲಿಗೆ ಬಳ್ಳಾರಿಯ ಸಿ. ಚನ್ನಬಸವಣ್ಣ, ೨೦೨೧ನೇ ಸಾಲಿಗೆ ಗದಗನ ಚಂದ್ರಶೇಖರ ವಸ್ತçದ ಹಾಗೂ ೨೦೨೨ನೇ ಸಾಲಿಗೆ ಬ್ಯಾಡಗಿಯ ಸಂಕಮ್ಮ ಸಂಕಣ್ಣವರ ಅವರನ್ನು ಆಯ್ಕೆ ಮಾಡಿದೆ. ಸೆ. ೨೫ರಂದು ಸಂಜೆ ೬ ಗಂಟೆಗೆ ಸಂಘದಲ್ಲಿ ಜರುಗುವ ದತ್ತಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ೧೦,೦೦೦ ನಗದು ಒಳಗೊಂಡಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net