ಶಾಂತಕುಮಾರ್ ಗುಣವಾಗಲೆಂದು ಪೂಜೆ ಸಲ್ಲಿಕೆ

22rajesh10
Published on

ಚಾಮರಾಜನಗರ: ಪಂಜಾಬ್‌ನಲ್ಲಿ ನಡೆಯುತ್ತಿದ್ದ ರೈತ ಚಳವಳಿಗೆ ಬೆಂಬಲ ನೀಡಲು ಹೋಗಿದ್ದಾಗ ಅಪಘಾತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಶೀಘ್ರ ಗುಣಮುಖರಾಗಲೆಂದು ರೈತ ಮುಖಂಡರು ಯಳಂದೂರಿನ ವಿವಿಧ ದೇಗುಲಗಳಲ್ಲಿ ಶನಿವಾರ ಪೂಜೆ ಸಲ್ಲಿಸಿದರು.

ಯಳಂದೂರು ತಾಲೂಕು ಗಂಗವಾಡಿ ವೀರಭದ್ರೇಶ್ವರ ಸ್ವಾಮಿ ಹಾಗೂ ಭದ್ರಕಾಳಮ್ಮ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದರು. ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಉಡಿಗಾಲ ರೇವಣ್ಣ,

ಜಿಲ್ಲಾ ಉಪಾಧ್ಯಕ್ಷ ಪಟೇಲ್ ಶಿವಮೂರ್ತಿ, ಜಿಲ್ಲಾ ಕಾರ್ಯದರ್ಶಿ ಎಚ್.ಮೂಕಳ್ಳಿ ಮಹದೇವಸ್ವಾಮಿ,

ತಾಲೂಕು ಕಾರ್ಯದರ್ಶಿ ಉಡಿಗಾಲ ಸುಂದರಪ್ಪ, ರಾಜು, ಮಹೇಶ್, ಕಾಗಲವಾಡಿ ಬಾಬು ಮತ್ತು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net