

ಇಳಕಲ್ಲ (ಗ್ರಾ): ನಗರದಲ್ಲಿ ಬಕ್ರೀದ್ ಹಬ್ಬವನ್ನು ಶಾಂತ ರೀತಿಯಲ್ಲಿ ಆಚರಿಸಬೇಕು ಎಂದು ಸಿಪಿಐ ಸುನೀಲ ಸವದಿ ಹೇಳಿದರು.
ನಗರದ ಪೊಲೀಸ್ ಠಾಣೆ ಆವರಣದಲ್ಲಿ ಆಯೋಜಿಸಿದ್ದ ಶಾಂತಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಬಕ್ರೀದ್ ಹಬ್ಬದ ಹೆಸರಿನಲ್ಲಿ ಗೋವು, ಒಂಟೆಯಂತಹ ಪ್ರಾಣಿ ಬಲಿ ಕೊಡಬಾರದು. ತಮ್ಮ ತಮ್ಮ ಮನೆಗಳಲ್ಲಿ ಶಾಂತ ರೀತಿಯಿಂದ ಹಬ್ಬ ಆಚರಿಸಬೇಕು ಎಂದು ಹೇಳಿದರು.
ಶಹರ್ ಪೊಲೀಸ್ ಠಾಣೆಯ ಪಿಎಸ್‌ಐ ಎಸ್.ಆರ್. ನಾಯಕ ಮಾತನಾಡಿ, ಹಬ್ಬದ ಹೆಸರಲ್ಲಿ ಯಾವುದೇ ತಪ್ಪು ಮಾಡದಿರಿ. ಸಂತೋಷಕ್ಕಾಗಿ ಹಬ್ಬ ಆಚರಿಸಲಾಗುತ್ತದೆ. ಯಾವುದೇ ಗೊಂದಲಗಳಿಗೆ ಅವಕಾಶ ನೀಡಬಾರದು ಎಂದರು.
ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಉಸ್ಮಾನಗಣಿ ಹುಮ್ನಾಬಾದ್, ದಿಶಾ ಸದಸ್ಯ ಮಹಾಂತಪ್ಪ ಚೆನ್ನಿ, ನಗರಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಸಿ.ಚಂದ್ರಪಟ್ಟಣ, ಬಾಬುಸಾಬ ಶಿವನಗುತ್ತಿ, ಅಹಮದಸಾಬ ಬಾಗವಾನ ಕಂಡಕ್ಟರ್, ಮಹಮ್ಮದ್ ರಫೀಕ್ ಐಹೊಳೆ ಮಾತನಾಡಿದರು.
ಲಕ್ಷ್ಮಿಬಾಯಿ ಗಾಜಿ, ಮಂಜುನಾಥ ಸಪ್ಪರದ, ದುರ್ಗೇಶ ವಡ್ಡರ ಇದ್ದರು.