ಶಹಾಬಾದ್‌ನಲ್ಲಿ ಪಲ್ಲಕ್ಕಿ ಉತ್ಸವ ಸಂಭ್ರಮ

klb3
ಶಹಾಬಾದ್‌ನ ಪ್ರಮುಖ ಬೀದಗಳಲ್ಲಿ ಜ್ಞಾನೇಶ್ವರಿ ಗ್ರಂಥದೊAದಿಗೆ ಪಲ್ಲಕ್ಕಿ ಮೆರವಣಿಗೆ ನಡೆಯಿತು.
Published on

ಶಹಾಬಾದ್: ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಪಾಂಡುರAಗ ರುಕ್ಮಿಣಿಯರ ಪಲ್ಲಕ್ಕಿ ಉತ್ಸವ ಹಾಗೂ ಜ್ಞಾನೇಶ್ವರಿ ಗ್ರಂಥದ ಮೆರವಣಿಗೆ ನಡೆಯಿತು. ನಗರದ ವಿಠ್ಠಲ ಮಂದಿರದಲ್ಲಿ ಸೋಮವಾರ ಮಧ್ಯರಾತ್ರಿ ಕೃಷ್ಣನ ತೊಟ್ಟಿಲೋತ್ಸವ ನೆರವೇರಿಸಿ ಭಜನೆ, ಕೀರ್ತನೆ ಜರುಗಿದವು. ಜ್ಞಾನೇಶ್ವರಿ ಗ್ರಂಥ ಪಾರಾಯಣ ಮಂಗಲಗೊಳಿಸಿದ ಬಳಿಕ ನಡೆದ ಪಲ್ಲಕ್ಕಿ ಮೆರವಣಿಗೆಯುದ್ದಕ್ಕೂ ಯುವಕರು ಭಜನೆ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಪ್ರಮುಖ ಚೌಕ್‌ಗಳಲ್ಲಿ ಕಟ್ಟಿದ್ದ ಮೊಸರಿನ ಗಡಿಗೆಗಳನ್ನು ಮಾನವ ಪಿರಾಮಿಡ್ ಮೂಲಕ ಒಡೆದರು. ಮೆರವಣಿಗೆ ದೇವಸ್ಥಾನ ತಲುಪಿದ ಬಳಿಕ ಕಟ್ಟಿದ್ದ ಗಡಿಗೆಗೆ ವೀಣೆಯನ್ನು ಸ್ಪರ್ಶಿಸುವ ಮೂಲಕ ಅಖಂಡ ವೀಣಾವಾದನ ಸಮಾಪ್ತಿಗೊಳಿಸಲಾಯಿತು. ಬಿಜೆಪಿ ಮುಖಂಡ ಗೋರಖನಾಥ ಶಾಖಾಪುರೆ ದೇವರ ದರ್ಶನ ಪಡೆದರು. ದೇವಸ್ಥಾನ ಸಮಿತಿಯ ಬಾಬು ಸಾಳೊಂಕೆ, ಈರಣ್ಣಾ ಪ್ಯಾರಸಾಬಾದಿ, ಮಹಾದೇವ ಕುಲಕರ್ಣಿ, ಚಂದ್ರಕಾAತ ಜೋಶಿ, ಕಲ್ಯಾಣ ಜವಳೆ, ಜಗದೀಶ ಮಠಪತಿ, ಉಮೇಶ ಸೋನಾರ, ರಾಮು ಕುಸಾಳೆ, ಬಸವರಾಜ ಸಾತ್ಯಾಳ, ಸಚಿನ್ ಹಂಚಾಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net