ಶಹಾಬಾದ್‌ನಲ್ಲಿ ಪಂಚಮಿ ಸಂಭ್ರಮ

PH 09
Published on

ಶಹಾಬಾದ್: ಪಟ್ಟಣ ಸೇರಿ ತಾಲೂಕಿನಾದ್ಯಂತ ಸೋಮವಾರ ಸಂಭ್ರಮದಿಂದ ನಾಗರ ಪಂಚಮಿ ಆಚರಿಸಲಾಯಿತು. ಮಹಾನಗರ ತಾಂಡಾದ ಯಲ್ಲಾಲಿಂಗ ಪುಣ್ಯಾಶ್ರಮದಲ್ಲಿನ ಹುತ್ತಕ್ಕೆ ಮಹಿಳೆಯರು ಹಾಲೆರೆದು ಪೂಜೆ ಸಲ್ಲಿಸಿದರು. ಬಳಿಕ ಶ್ರೀ ಜೇಮಸಿಂಗ್ ಮಹಾರಾಜರ ದರ್ಶನಾಶೀರ್ವಾದ ಪಡೆದರು.

ಹನುಮಾನ ನಗರದಲ್ಲಿನ ನಾಗ ದೇವತೆ ಹಾಗೂ ಸ್ಟೇಷನ್ ಬಳಿಯ ಕಟ್ಟಡವೊಂದರಲ್ಲಿ ಬೆಳೆದಿರುವ ಹುತ್ತಕ್ಕೆ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಲ್ಲಿ ಅನ್ನಸಂತರ್ಪಣೆ ನಡೆಯಿತು.

ಭಂಕೂರಿನಲ್ಲಿ ಬಸವ ಸಮಿತಿಯಿಂದ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಬಸವ ಪಂಚಮಿ ಆಚರಿಸಲಾಯಿತು. ಗದಗಿನ ಬಸವ ತತ್ವ ಚಿಂತಕಿ ಗಿರಿಜಕ್ಕ ಧರ್ಮರೆಡ್ಡಿ ಮಾತನಾಡಿ, ಬಸವಣ್ಣ ಅವರು 12ನೇ ಶತಮಾನದಲ್ಲಿಯೇ ಮೌಢ್ಯತೆಯ ವಿರುದ್ಧ ಧ್ವನಿ ಎತ್ತಿದ್ದರು. ಹುತ್ತಕ್ಕೆ ಹಾಲೆರೆಯುವ ಸಂಪ್ರದಾಯವನ್ನು ವೈದಿಕರು ಮಾಡಿಕೊಂಡಿದ್ದು, ಇದು ಅವೈಜ್ಞಾನಿಕ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದರು.

ಬಸವ ಸಮಿತಿ ಪದಾಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net