ಶಹಾಬಾದ್ ನಲ್ಲಿ ಹೆಚ್ಚಿದ ನಾಯಿಗಳ ಉಪಟಳ

27 8 SBD 1
Published on

ಶಹಾಬಾದ್: ಪಟ್ಟಣದಲ್ಲಿ ದಿನ ಕಳೆದಂತೆ ನಾಯಿಗಳ ಕಾಟ ಹೆಚ್ಚಾಗುತ್ತಿದೆ. ಗುರುವಾರ ಐದು ಮಕ್ಕಳಿಗೆ ನಾಯಿಗಳು ಕಚ್ಚಿದ್ದು, ಒಂದು ಮಗುವಿಗೆ ಕೈ ಮುರಿದೆ. ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಗೆ ಕಳುಹಿಸಲಾಗಿದೆ.
ನಗರದ ಇಂದಿರಾ ನಗರ ಮಡ್ಡಿ-2 ಭಾಗದಲ್ಲಿ ಬೆಳಗ್ಗೆ ಅನನ್ಯ ಮಹಾಂತೇಶ (1) ಎಂಬುವ ಮಗು ಮನೆಯ ಮುಂದೆ ನಿಂತಿದ್ದಾಗ ನಾಯಿ ದಾಳಿ ಮಾಡಿ ತೊಡೆಯನ್ನು ಕಚ್ಚಿದೆ. ನಾಯಿ ದಾಳಿ ರಭಸಕ್ಕೆ ಮಗು ಬಿದ್ದಿದ್ದು, ಬಲಗೈ ಮುರಿದಿದೆ. ಸಕರ್ಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕಳುಹಿಸಲಾಗಿದೆ.
ಇನ್ನುಳಿದಂತೆ ಭವಾನಿ ಸುನೀಲ (11), ಸೋಯಬ್ ಜಾಕೀರ್ ಹುಸೇನ್ (10), ಮುಜಾಹಿದ್ ಮಹಿಬೂಬ್ (6), ಇನ್ನೋರ್ವ ಮಗುವಿನ ಹೆಸರು ತಿಳಿದುಬಂದಿಲ್ಲ. ಮಕ್ಕಳ ಮೇಲಿನ ದಾಳಿಯಿಂದ ರೊಚ್ಚಿಗೆದ್ದ ಸ್ಥಳೀಯರು ಬಡಾವಣೆಯಲ್ಲಿ ತಿರುಗಾಡಿ ನಾಯಿಗಳನ್ನು ಹುಡುಕಾಡಿ ಕೊಂದಿದ್ದಾರೆ. ನಗರದಲ್ಲಿ ಹೆಚ್ಚುತ್ತಿರುವ ನಾಯಿಗಳ ಕಾಟಕ್ಕೆ ಬ್ರೇಕ್ ಹಾಕಬೇಕಿದೆ. ಇಲ್ಲವಾದಲ್ಲಿ ಮುಂದಾಗುವ ಅನಾಹುತಕ್ಕೆ ನಗರಸಭೆಯೇ ಸಂಪೂರ್ಣ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಸ್ಥಳೀಯರಾದ ಶರಣು ಜಾಲಹಳ್ಳಿ, ನಾಗರಾಜ ಮುದ್ನಾಳ, ಮೋಹನ ಹಳ್ಳಿ, ಶಿವಪ್ಪ ಮದ್ರಕಿ, ಸಾಗರ ದೊಡ್ಡಮನಿ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net