ಶಹಾಬಾದ್​; ಜೆಪಿ ಸಿಮೆಂಟ್ ಕಾರ್ಖಾನೆ ಕಾರ್ಮಿಕರ ವೇತನ ಪರಿಷ್ಕರಣೆ

PH 03
Published on

ಶಹಾಬಾದ್: ನಗರದಲ್ಲಿ ಹಲವು ವರ್ಷಗಳಿಂದ ಉತ್ಪಾದನೆ ಸ್ಥಗಿತಗೊಂಡಿರುವ ಜೆಪಿ ಸಿಮೆಂಟ್ ಕಾರ್ಖಾನೆ ಕಾರ್ಮಿಕರ ವೇತನ ಪರಿಷ್ಕರಣೆ ಶುಕ್ರವಾರ ನಡೆಯಿತು.

ಕಳೆದ ಹಲವಾರು ವರ್ಷಗಳಿಂದ ಕಾರ್ಮಿಕರ ವೇತನ ಪರಿಷ್ಕರಣೆ ನಡೆಯದೆ ಇದುದ್ದರಿಂದ ಇಲ್ಲಿಯ ಎಐಟಿಯಸಿ ಕಾರ್ಮಿಕ ಸಂಘಟನೆ ಮುಖಂಡರು ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಿ, ವೇತನ ಪರಿಷ್ಕರಣೆಗೆ ಒಪ್ಪಲಾಯಿತು. 1997ರಲ್ಲಿ ಕಾರ್ಖಾನೆ ಮುಚ್ಚಲ್ಪಟ್ಟಿದ್ದರಿಂದ ಹಲವಾರು ವರ್ಷ ಕಾರ್ಮಿಕರು ಬೀದಿಗೆ ಬಿದ್ದಿದ್ದರು. ನಂತರ ಕಾರ್ಖಾನೆ ಪ್ರಾರಂಭವಾದ ನಂತರ 13 ವರ್ಷಗಳ ಹಿಂದೆ ಕಾರ್ಮಿಕರು ಕೇವಲ 5 ಸಾವಿರ ರೂ. ಸಂಬಳದಲ್ಲಿ ಕೆಲಸ ಮಾಡುವದು ಅನಿವಾರ್ಯವಾಗಿತ್ತು. ನಂತರ ದಿನಗಳಲ್ಲಿ ಕಾರ್ಮಿಕ ಸಂಘದ ಸತತ ಪರಿಶ್ರಮ, ಆಡಳಿತ ಮಂಡಳಿ, ಕಾರ್ಮಿಕರ ನಡುವೆ ಸಮತೋಲನೆ ಸಾಧಿಸಿ, ನಿರಂತರ ಚರ್ಚೆಯಿಂದ ಪ್ರತಿ ಮೂರು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆಗೊಂಡಿತ್ತು. 2021ರಿಂದ ಇಲ್ಲಿಯವರಗೆ 3 ಸಾವಿರ ರೂ. ವೇತನ ಪರಿಷ್ಕೃತಗೊಂಡಿದ್ದು ಇದರಿಂದ ಕಾರ್ಮಿಕರ ವೇತನ 25 ರಿಂದ 28 ಸಾವಿರಕ್ಕೆ ಹೆಚ್ಚಲ್ಪಟ್ಟಿದೆ.

ವೇತನ ಪರಿಸ್ಕೃರನೆ ಸಭೆಯಲ್ಲಿ ಆಡಳಿತ ಮಂಡಳಿಯ ಜಂಟಿ ಅಧ್ಯಕ್ಷರಾದ ಮಂಜುನಾಥ ಪ್ರಭು, ಡಿಜಿಎಂ (ಪಿಎ) ರಾಜೀಬ್ ಗೋಯಲ್, ಲೈಸನಿಂಗ್ ಅಧಿಕಾರಿ ಶ್ರೀಧರ ತೊರವಿ, ಕಾರ್ಮಿಕ ಸಂಘದ ಅಧ್ಯಕ್ಷ ಮ.ಉಬೇದುಲ್ಲಾ, ಉಪಾಧ್ಯಕ್ಷರಾದ ಚಂದ್ರಕಾಂತ ವಾಲೀಕಾರ, ಸುಭಾಷ, ಕೆರೆಯಪ್ಪ, ಪ್ರಧಾನ ಕಾರ್ಯದರ್ಶಿ ಭೀಮರಾವ ಸಂಕನೂರ, ಕಾರ್ಯದರ್ಶಿ ನಾಗರಾಜ ಕುಸಾಳೆ, ಪ್ರದೀಪ ಪಟ್ಟೇದಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net