

ಶಹಾಬಾದ್: ಶ್ರಾವಣ ಪವಿತ್ರ ಮಾಸವಾಗಿದ್ದು, ಭಗವಂತನ ಸ್ಮರಣೆ ಹಾಗೂ ಧ್ಯಾನಕ್ಕೆ ಪ್ರಶಸ್ತವಾದ ತಿಂಗಳಾಗಿದೆ. ನಿತ್ಯ ಇಷ್ಟಲಿಂಗ ಪೂಜೆಯಿಂದ ಮಾನಸಿಕ ಶಾಂತಿ ಸಿಗುತ್ತದೆ ಎಂದು ಕೂಡಲ್‌ನ ಗುರುನಂಜೇಶ್ವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
ಶ್ರೀ ಜಗದಂಬಾ ಮಂದಿರದಲ್ಲಿ ಶ್ರಾವಣ ನಿಮಿತ್ತ ಶುಕ್ರವಾರ ಸಂಜೆ ಆಯೋಜಿಸಿದ್ದ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಪ್ರತಿದಿನ ಮನೆಯಲ್ಲಿ ಇಷ್ಟಲಿಂಗ ಪೂಜೆ ಮಾಡಬೇಕು. ಧರ್ಮ ಕಾರ್ಯಗಳಿಗೆ ಆದ್ಯತೆ ನೀಡಿ. ಮಕ್ಕಳಿಗೂ ಸಂಸ್ಕಾರ ಹೇಳಿಕೊಡಿ ಎಂದು ಸಲಹೆ ನೀಡಿದರು.
ರಾವೂರಿನ ಶ್ರೀ ಸಿದ್ಧಲಿಂಗ ಸ್ವಾಮೀಜಿ ನೇತೃತ್ವ ವಹಿಸಿದ್ದರಯ. ಶರಣು ನಂದಿ ದಂಪತಿ ಶ್ರೀಗಳ ಪಾದಪೂಜೆ ಮಾಡಿದರು. ಕುಮಾರ ಶಾಸ್ತಿç ವೈದಿಕತ್ವದಲ್ಲಿ ನೂರಾರು ಭಕ್ತರು ಇಷ್ಟಲಿಂಗ ನೆರವೇರಿಸಿದರು.
ಪ್ರಮುಖರಾದ ಡಾ.ಅಶೋಕ ಜಿಂಗಾಡೆ, ಅನೀಲ ಹೀಬಾರೆ, ಶರಣಬಸಪ್ಪ ಕೋಬಾಳ, ರಮೇಶ ಅಷ್ಟಿಗಿಕರ್, ಬಸವರಾಜ ಸಾತಿಹಾಳ, ಅಶೋಕ ವಾಗಿಣಗೇರಿ, ರಮೇಶ ಸಾಳೊಂಕೆ, ನಿಂಗಣ್ಣ ಹುಳಗೋಳ, ಕಾಶಣ್ಣ ಚನ್ನೂರ ಇತರರಿದ್ದರು. ರವಿಕುಮಾರ ಅಲ್ಲಮಶೆಟ್ಟಿ ನಿರೂಪಣೆ ಮಾಡಿದರು.