ಶಶಿಕಲಾ ಜೊಲ್ಲೆ ಆಯ್ಕೆ

31npn1
ಭಾರತೀಯ ವಿಶೇಷ ಒಲಿಂಪಿಕ್ಸ್​ ಕರ್ನಾಟಕ ರಾಜ್ಯಾಧ್ಯೆ ಶಾಸಕಿ ಶಶಿಕಲಾ ಜೊಲ್ಲೆ , ರೂಪಸಿಂಗ್​ ಜನರಲ್​, ಅಮರೇಂದ್ರ ಎ., ನಾರಾಯಣ ಐ.ಡಿ, ಶಕುಂತಲಾ ಭಟ್​, ಹಾಲಪ್ಪ ಹಿರೇಮಠ ಇತರರಿದ್ದರು.
Published on

ನಿಪ್ಪಾಣಿ: ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಭಾರತೀಯ ವಿಶೇಷ ಒಲಿಂಪಿಕ್ಸ್​ ಕರ್ನಾಟಕ ರಾಜ್ಯದ ಅಧ್ಯರಾಗಿ ಗುರುವಾರ ಆಯ್ಕೆಗೊಂಡಿದ್ದಾರೆ. ಬೆಂಗಳೂರಿನಲ್ಲಿ ಈಚೆಗೆ ಜರುಗಿದ ಅಂಗವಿಕಲ ಮಕ್ಕಳ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದ ಭಾರತೀಯ ವಿಶೇಷ ಒಲಿಂಪಿಕ್ಸ್​ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಾಸಕಿ ಶಶಿಕಲಾ ಜೊಲ್ಲೆ, ಉಪಾಧ್ಯರಾಗಿ ರೂಪಸಿಂಗ್​ ಜನರಲ್​, ಕಾರ್ಯದರ್ಶಿಯಾಗಿ ಅಮರೇಂದ್ರ ಎ., ಕ್ರೀಡಾ ನಿರ್ದೇಶಕರಾಗಿ ನಾರಾಯಣ ಐ.ಡಿ, ಶಕುಂತಲಾ ಭಟ್​, ಹಾಲಪ್ಪ ಹಿರೇಮಠ ಆಯ್ಕೆಯಾಗಿದ್ದಾರೆ.
ಶಾಸಕಿ ಶಶಿಕಲಾ ಜೊಲ್ಲೆ ಪ್ರತಿಕ್ರಿಯಿಸಿ, ರಾಷ್ಟ್ರೀಯ ಅಧ್ಯ ಮಲ್ಲಿಕಾ ನಡ್ಡಾ ನೇತತ್ವದಲ್ಲಿ ದೇಶದಲ್ಲಿ ಅಂಗವಿಕಲ ಮಕ್ಕಳಿಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅವರ ನಾಯಕತ್ವದಲ್ಲಿ ಅಂಗವಿಕಲ ಮಕ್ಕಳನ್ನು ವಿಶೇಷ ಒಲಿಂಪಿಕ್ಸ್​ಗೆ ಸಿದ್ಧಗೊಳಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net