ಶಿವಾಜಿಮೂರ್ತಿ ತೆರವು ಖಂಡಿಸಿ ಕಲಾದಗಿಯಲ್ಲಿ ಪ್ರತಿಭಟನೆ

manavi sallike
ಬಾಗಲಕೋಟೆಯಲ್ಲಿ ಶಿವಾಜಿ ಮೂರ್ತಿ ತೆರವು ಖಂಡಿಸಿ ಕಲಾದಗಿಯಲ್ಲಿ ಹಿಂದು ಜಾಗರಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ಎಸ್.ಬಿ. ಇಟಗಿಯವರಿಗೆ ಮನವಿ ಸಲ್ಲಿಸಿದರು.
Published on

ಕಲಾದಗಿ: ಇತ್ತೀಚೆಗೆ ಬಾಗಲಕೋಟೆಯಲ್ಲಿ ಶಿವಾಜಿ ಮಹಾರಾಜರ ಮೂರ್ತಿ ತೆರವುಗೊಳಿಸಿದ್ದನ್ನು ಖಂಡಿಸಿ ಗ್ರಾಮದಲ್ಲಿ ಶುಕ್ರವಾರ ಹಿಂದೂ ಜಾಗರಣ ವೇದಿಕೆಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಹೊಸೂರ್ ಚೌಕದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಬಸವನದೇವರ ಗುಡಿ, ಬಾಗವಾನ ಗಲ್ಲಿ, ಕೊಬ್ರಿಕ್ರಾಸ್, ಗ್ರಾಪಂ ಕಾರ್ಯಾಲಯ, ಅಡತ್ ಬಜಾರ್, ಮರಾಠ ಗಲ್ಲಿ, ಹರಣಿ ಶಿಕಾರಿ ಕಾಲನಿ, ಬಸವೇಶ್ವರ ವೃತ್ತ ಮಾರ್ಗವಾಗಿ ವಿವಿಧ ಘೋಷಣೆಗಳನ್ನು ಕೂಗುತ್ತ ನಾಡಕಚೇರಿಗೆ ಆಗಮಿಸಿ ಉಪತಹಸೀಲ್ದಾರ್ ಎಸ್.ಬಿ. ಇಟಗಿ ಅವರಿಗೆ ಮನವಿ ಸಲ್ಲಿಸಿದರು.
ಹಿಂದು ಜಾಗರಣ ವೇದಿಕೆಯ ಮುಧೋಳ ತಾಲೂಕು ಸಂಪರ್ಕ ಪ್ರಮುಖ ಕೃಷ್ಣಾ ಸುಲಾಖೆ ಮಾತನಾಡಿ, ಬಾಗಲಕೋಟೆಯಲ್ಲಿ ಎಲ್ಲವೂ ಕಾನೂನಾತ್ಮಕವಾಗಿ ನಡೆದಿದ್ದರೂ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆಗೆ ಅನಾವಶ್ಯಕವಾಗಿ ಜಿಲ್ಲಾಡಳಿತ ಅಡ್ಡಿಪಡಿಸಿ ಸಮಾಜದಲ್ಲಿ ಅಶಾಂತಿ ಮೂಡಲು ಕಾರಣವಾಗಿದೆ ಎಂದು ಆರೋಪಿಸಿದರು.
ಕೂಡಲೇ ಜಿಲ್ಲಾಡಳಿತ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗದಿದ್ದರೆ ಹಿಂದು ಜಾಗರಣ ವೇದಿಕೆಯಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತಿದೆ ಎಂದು ಎಚ್ಚರಿಸಿದರು.
ಮುಖಂಡ ಬಶೆಟ್ಟೆಪ್ಪ ಅಂಗಡಿ, ಶ್ರೀಧರ ವಾಘ, ಯಲ್ಲಪ್ಪ ಹೊಸಕೋಟಿ, ಭೀಮಶಿ ಕರಿಡಿಗುಡ್ಡ, ಸದಾಶಿವ ಸಣ್ಣಕ್ಕಿ, ಸಮಾದಾನ ದೇಶಮುಖ ಹಾಗೂ ವೇದಿಕೆಯ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net