ಶವ ತರಲು ಪರದಾಡಿದ ಆಂಬುಲೆನ್ಸ್

03
Published on

ಚಿAಚೋಳಿ : ಕಲಬುರಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಹಿರಿಯರೊಬ್ಬರ ಶವವನ್ನು ಅವರ ಊರು ಗಾರಂಪಳ್ಳಿಗೆ ಶುಕ್ರವಾರ ಬೆಳಗ್ಗೆ ಕೊಂಡೊಯ್ಯುತ್ತಿದ್ದ ಆಂಬುಲೆನ್ಸ್ ತುಂಬಿ ಹರಿಯುತ್ತಿರುವ ಭೋಗಾವತಿ ನದಿ ಸೇತುವೆ ದಾಟಲು ಪರದಾಡುವಂತಾಯಿತು.

ಕಲಬುರಗಿಯಲ್ಲಿ ಮೃತಪಟ್ಟಿದ್ದ ಕಲ್ಲಪ್ಪ ಹೂಗಾರ (೮೮) ಅವರ ಅಂತ್ಯಸAಸ್ಕಾರ ನೆರವೇರಿಸಲು ಕುಟುಂಬದವರು ಸ್ವಗ್ರಾಮ ಗಾರಂಪಳ್ಳಿಗೆ ಶವ ಹೊತ್ತು ಆಂಬುಲೆನ್ಸ್ನಲ್ಲಿ ಹೊರಟಿದ್ದರು. ಆದರೆ ಭೋರ್ಗರೆಯುತ್ತಿರುವ ಭೋಗಾವತಿ ನದಿ ನೋಡಿ ಸ್ವಲ್ಪ ಹೊತ್ತು ದಂಡೆಯಲ್ಲಿ ಕಾದರು. ನೀರಿನ ಹರಿವು ಇಳಿಮುಖವಾದ ಬಳಿಕ ಶವವನ್ನು ಮನೆಗೆ ಸಾಗಿಸಲಾಯಿತು.

ನಾಲ್ಕು ದಿನದಿಂದ ಸತತ ಸುರಿಯುತ್ತಿರುವ ಮಳೆಯಿಂದ ನಾಗರಾಳ ಕೆರೆ ಭರ್ತಿಯಾಗಿ ಪದೇಪದೆ ಬೋಗಾವತಿ ನದಿಗೆ ನೀರು ಬಿಡುತ್ತಿರುವುದರಿಂದ ರಸ್ತೆ ಸೇತುವೆ ಮೇಲೆ ರಭಸದಿಂದ ನೀರು ಹರಿಯುತ್ತಿದೆ. ಹೀಗಾಗಿ ಕನಕಪುರ ಪ್ರೌಢಶಾಲೆ ಮತ್ತು ಚಿಂಚೋಳಿಗೆ ೧೦೦-೧೫೦ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೋಗಲು ಸಾಧ್ಯವಾಗದೆ ರಜೆ ಮಾಡುವಂತಾಗಿದೆ.

ಸೇತುವೆ ಎತ್ತರ ಹೆಚ್ಚಿಸುವ ಅಗತ್ಯವನ್ನು ಶಾಸಕ ಡಾ.ಅವಿನಾಶ ಜಾಧವ್ ಮತ್ತು ಸಂಸದ ಡಾ.ಉಮೇಶ ಜಾಧವ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈಗಲಾದರೂ ಸಮಸ್ಯೆಯ ಗಂಭೀರತೆ ಅರಿತು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಹಿತದೃಷ್ಟಿಯಿಂದ ಸೇತುವೆ ಎತ್ತರ ಹೆಚ್ಚಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net