

ಚಿಕ್ಕಮಗಳೂರು: ತಾಲೂಕಿನ ತೊಗರಿಹಂಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ಚಿಕ್ಕಮಗಳೂರು ರೌಂಡ್ ಟೇಬಲ್ ಕ್ಲಬ್‌ನಿಂದ ೩೦ ಲಕ್ಷ ರೂ. ವ್ಯಯಿಸಿ ನೂತನ ಶಾಲಾ ಕೊಠಡಿಗಳ ನಿರ್ಮಾಣ ಮಾಡಲು ಮುಂದಾಗಿದ್ದು, ಇದಕ್ಕಾಗಿ ಶನಿವಾರ ಭೂಮಿ ಪೂಜೆ ನೆರವೇರಿಸಲಾಯಿತು.
ಈ ವೇಳೆ ಮಾತನಾಡಿದ ಕ್ಲಬ್ ಮುಖ್ಯಸ್ಥ ರಾಷ್ಟಿçÃತ್, ಗ್ರಾಮೀಣ ಮಕ್ಕಳು ಶಾಲೆಯಲ್ಲಿ ಮೂಲ ಸೌಕರ್ಯಗಳಿಂದ ವಂಚಿತರಾಗದAತೆ ಸಮರ್ಪಕ ಶಿಕ್ಷಣ ಒದಗಿಸುವÀ ನಿಟ್ಟಿನಲ್ಲಿ ಸಂಸ್ಥೆಯಿAದ ನೂತನ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿz್ದೆÃವೆ. ಶೀಘ್ರವೇ ಕೊಠಡಿಗಳ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಇತ್ತೀಚಿನ ಬೆಳವಣಿಗೆಯಲ್ಲಿ ಗ್ರಾಮೀಣ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವುದು ತೀವ್ರ ವಿರಳವಾಗಿದೆ. ಆಂಗ್ಲಶಾಲೆಗಳ ವ್ಯಾಮೋಹದಿಂದ ಪಾಲಕರು ಮರಳಾಗುತ್ತಿದ್ದಾರೆ. ಹೀಗಾಗಿ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಹಕಾರದಿಂದ ಗ್ರಾಮದಲ್ಲಿ ಸುಸಜ್ಜಿತ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಿದೆ ಎಂದರು.
ಪ್ರಸ್ತುತ ಗ್ರಾಮದ ಶಾಲಾ ಕಟ್ಟಡ ಹಳೆಯದಾಗಿದೆ. ಇದನ್ನರಿತು ಚಿಕ್ಕಮಗಳೂರು ರೌಂಡ್ ಟೇಬಲ್ ಮಕ್ಕಳಿಗೆ ಸಹಾಯಹಸ್ತ ಚಾಚಿ ಕೊಠಡಿ ನಿರ್ಮಿಸಲು ಮುಂದಾಗಿದೆ. ಕಟ್ಟಡವನ್ನು ಸಂಪೂರ್ಣವಾಗಿ ಸಂಸ್ಥೆಯಿAದ ನಿರ್ಮಿಸಿ ಬಳಿಕ ಶಾಲೆಗೆ ಹಸ್ತಾಂತರಿಸಲಾಗುವುದು ಎಂದು ಮಾಹಿತಿ ನೀಡಿದರು.
ಈಗಾಗಲೇ ಚಿಕ್ಕಮಗಳೂರು ರೌಂಡ್ ಟೇಬಲ್‌ನಿಂದ ತಾಲೂಕಿನ ವಿವಿಧ ಗ್ರಾಮದ ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಸ್ಮಾರ್ಟ್ ತರಗತಿ, ಸರ್ಕಾರಿ ಆಸ್ಪತ್ರೆಯಲ್ಲಿ ಐಸಿಯು ವಾರ್ಡ್ ಸೇರಿದಂತೆ ಅನೇಕ ಸಾಮಾಜಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಮಟ್ಟದಲ್ಲಿ ಸೇವಾಚಟುವಟಿಕೆ ರೂಪಿಸುವ ಉz್ದÉÃಶವಿದೆ ಎಂದರು.
ರೌAಡ್ ಟೇಬಲ್ ವಲಯ ಮಟ್ಟದ ಅಧ್ಯಕ್ಷ ಕುಮಾರ್ ಪಾಲ್ ಮಾತನಾಡಿ, ಚಿಕ್ಕಮಗಳೂರಿನಲ್ಲಿ ರೌಂಡ್ ಟೇಬಲ್ ಅನೇಕ ವರ್ಷಗಳಿಂದ ಸಾಮಾಜಿಕ ಕಾರ್ಯಕ್ರಮ ರೂಪಿಸಿ ಮಕ್ಕಳು ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿವೆ. ಮುಂದೆ ಯಾವುದಾದರು ಸೇವೆಗೂ ವಲಯ ಹಾಗೂ ರಾಷ್ಟç ಮಟ್ಟದಲ್ಲಿ ರೌಂಡ್ ಟೇಬಲ್ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೌಂಡ್ ಟೇಬಲ್ ವಲಯಮಟ್ಟದ ಉಪಾಧ್ಯಕ್ಷ ಸೂಶುತ್, ಕಟ್ಟಡ ಯೋಜನೆ ಮುಖ್ಯಸ್ಥ ವಿನಯ್‌ರಾಜ್, ಶಾಲೆಯ ಮುಖ್ಯಶಿಕ್ಷಕಿ ಹೇಮಲತಾ, ಚಿಕ್ಕಮಗಳೂರು ರೌಂಡ್ ಟೇಬಲ್ ಸದಸ್ಯರಾದ ಈಶ್ವರ್ ಸರ್ಜಿ, ವಿನಾಯಕ, ಅನಿಲ್, ಕವನ್, ಶಾಶ್ವತ್, ಸೂರಜ್, ಸಮನ್ವಿತ್, ದರ್ಶನ್, ಎಸ್‌ಡಿಎಂಸಿ ಅಧ್ಯಕ್ಷ ಶಿವಕುಮಾರ್ ಮತ್ತಿತರರಿದ್ದರು.