ಶರ್ಮ, ಕುಲಕರ್ಣಿ ಅವರನ್ನು ಬೆಂಬಲಿಸಿ

bkt-11-5
Published on

ಬಾಗಲಕೋಟೆ: ಏ.೧೩ ರಂದು ನಡೆಯಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ (ಎಕೆಬಿಎಂಎಸ್) ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಭಾನುಪ್ರಕಾಶ ಶರ್ಮ ಹಾಗೂ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಸ್ಪರ್ಧಿಸಿರುವ ರಾಘವೇಂದ್ರ ಕುಲಕರ್ಣಿ ಅವರಿಗೆ ಮತ ನೀಡಬೇಕು ಎಂದು ಬ್ರಾಹ್ಮಣ ತರುಣ ಸಂಘದ ಅಧ್ಯಕ್ಷ ನಾರಾಯಣ ದೇಸಾಯಿ ಮನವಿ ಮಾಡಿದರು.

ವಿದ್ಯಾಗಿರಿಯ ವಿಪ್ರ ರಾಯರ ಮಠದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಸಭಾದ ಅಧ್ಯಕ್ಷರಾಗಿ ಅಶೋಕ ಹಾರನಹಳ್ಳಿ ಅವರು ಅದ್ಭುತವಾಗಿ ಸಮಾಜವನ್ನು ಸಂಘಟನೆ ಮಾಡಿದ್ದಾರೆ. ಅವರ ಪ್ರತಿನಿಧಿಯಾಗಿರುವ ಭಾನುಪ್ರಕಾಶ ಶರ್ಮಾ ಅವರು ಕಣಕ್ಕಿಳಿದಿದ್ದು, ಅವರನ್ನು ಗೆಲ್ಲಿಸುವ ಜವಾಬ್ದಾರಿ ಮಹಾಸಭಾದ ಸದಸ್ಯರ ಮೇಲಿದೆ ಎಂದರು.

ಜಿಲ್ಲೆಯ ಮಹಾಸಭಾದ ಸದಸ್ಯರು ಸಂಘಟನೆ ಮಾಡಿದ ಅಶೋಕ ಹಾರನಹಳ್ಳಿ ಅವರ ಬೆಂಬಲಕ್ಕೆ ನಿಂತು, ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಸ್ಪರ್ಧಿಸಿರುವ ರಾಘವೇಂದ್ರ ಕುಲಕರ್ಣಿ ಅವರಿಗೆ ಓಟ ಹಾಕಿ ಗೆಲ್ಲಿಸಬೇಕಿದೆ ಎಂದರು.

ಎಕೆಬಿಎAಎಸ್‌ನ ಜಿಲ್ಲಾಧ್ಯಕ್ಷ ನರಸಿಂಹ ಆಲೂರ್ ಮಾತನಾಡಿ, ಜಿಲ್ಲೆಯ ಹಿರಿಯರು ಸೇರಿ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ರಾಘವೇಂದ್ರ ಕುಲಕರ್ಣಿ ಅವರನ್ನು ಆಯ್ಕೆ ಮಾಡಿದ್ದು, ಎಕೆಬಿಎಂಎಸ್ ಬಾಗಲಕೋಟೆ ಅಭ್ಯರ್ಥಿ ರಾಘವೇಂದ್ರ ಕುಲಕರ್ಣಿ ಅವರಿಗೆ ಮತ ನೀಡಬೇಕು. ಏ.೧೩ ರಂದು ನಡೆಯುವ ಮತದಾನದಂದು ಸದಸ್ಯರೆಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದು ವಿನಂತಿಸಿದರು.ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಸ್ಪರ್ಧಿಸಿರುವ ರಾಘವೇಂದ್ರ ಕುಲಕರ್ಣಿ ಮಾತನಾಡಿ, ಎಕೆಬಿಎಂಎಸ್‌ನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರತಿನಿಧಿಸಿರುವ ಭಾನುಪ್ರಕಾಶ ಶರ್ಮಾ ಕ್ರಮ ಸಂಖ್ಯೆ.೧ ಹಾಗೂ ನನ್ನ ಕ್ರಮ ಸಂಖ್ಯೆ ೨ಕ್ಕೆ ಮತ ನೀಡಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಎಕೆಬಿಎಂಎಸ್‌ನ ರಾಜ್ಯ ಉಪಾಧ್ಯಕ್ಷ ಡಾ.ಗಿರೀಶ ಮಸೂರಕರ, ಎಕೆಬಿಎಂಎಸ್‌ನ ಜಿಲ್ಲಾ ಕಾರ್ಯದರ್ಶಿ ಎಸ್.ಕೆ.ಕುಲಕರ್ಣಿ, ಮುಖಂಡರಾದ ವಿನಾಯಕ ತಾಳಿಕೋಟಿ, ಜಿ.ಆರ್.ದೇಶಪಾಂಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net