

ಕಾರವಾರ: ಮಹಿಳೆಯರು, ಮಕ್ಕಳ ರಕ್ಷಣೆಗಾಗಿ ಜಿಲ್ಲೆಯ ಕರಾವಳಿಯಲ್ಲಿ ರಚನೆಯಾಗಿರುವ ಶರಾವತಿ ಎಂಬ ಪೊಲೀಸ್ ಪಡೆಗೆ ಸರ್ಕಾರದಿಂದ ಸ್ಕೂಟರ್ಗಳನ್ನು ನೀಡಲಾಗಿದೆ. ನಿರ್ಭಯಾ ಯೋಜನೆಯಡಿ ಜಿಲ್ಲೆಗೆ 25 ಬೈಕ್ಗಳು ಮಂಜೂರಾಗಿದ್ದು, ಎಸ್ಪಿ ಶಿವಪ್ರಕಾಶ ದೇವರಾಜು ಆಯ್ದ ಮಹಿಳಾ ಪೊಲೀಸ್ ಅಧಿಕಾರಿಗಳಿಗೆ ಸ್ಕೂಟರ್ಗಳನ್ನು ಮಂಗಳವಾರ ಹಸ್ತಾಂತರಿಸಿದರು. ಡಿವೈಎಸ್ಪಿ ಅರವಿಂದ ಕಲಗುಜ್ಜಿ ಇದ್ದರು. ಮುಂದಿನ ದಿನದಲ್ಲಿ ಓಬವ್ವ ಪಡೆಗೂ ಬೈಕ್ ನೀಡಲಾಗುವುದು ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿದ್ದಾರೆ.