ಕಲ್ಯಾಣ ಕರ್ನಾಟಕ ಭಾಗದ ಯುವಕರಿಗೆ ಶ್ರೇಯಾಂಕ ಪಾಟೀಲ್ ಸ್ಫೂರ್ತಿ

0304Klb08
Published on


ಕಲಬುರಗಿ: ಕಲ್ಯಾಣ ಕರ್ನಾಟಕ ನೆಲದ ಕ್ರೀಡಾ ಕ್ಷೇತ್ರದ ಸಾಧನೆ ಹಾದಿಯಲ್ಲಿರುವವರಿಗೆ ಕ್ರಿಕೆಟರ್ ಶ್ರೇಯಾಂಕ ಪಾಟೀಲ್ ಸ್ಫೂರ್ತಿ ಎಂದು ಲಕ್ಷೀ ದತ್ತಾತ್ರೇಯ ಪಾಟೀಲ್ ರೇವೂರ ಬಣ್ಣಿಸಿದರು. ನಗರದಲ್ಲಿ ಕಲಬುರಗಿ ಗೆಳೆಯರ ಬಳಗದಿಂದ ಬುಧವಾರ ಆಯೋಜಿಸಿದ್ದ ಕರ್ನಾಟಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಉತ್ತಮ ಪ್ರದರ್ಶನ ತೋರಿದ್ದು, ನಮ್ಮ ಭಾಗದ ಹೆಮ್ಮೆ ಎಂದರು. ಯಲಗೋಡದ ಶ್ರೀ ಗುರುಲಿಂಗ ಸ್ವಾಮೀಜಿ, ನೀಲೂರದ ಶ್ರೀ ಶರಣಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಹಾನಗರ ಪಾಲಿಕೆ ಸದಸ್ಯೆ ಅರ್ಚನಾ ಪಾಟೀಲ್ ಬಿರಾಳ, ಮಲ್ಲು ಉದನೂರ, ಪ್ರಮುಖರಾದ ಗುರುಬಸಪ್ಪಗೌಡ ಪಾಟೀಲ್ ಬಿರಾಳ, ನಾಗಲಿಂಗಯ್ಯ ಮಠಪತಿ, ಬಸವರಾಜ ಪಾಟೀಲ್ ಬಿರಾಳ, ಶಿವು ಹಿರೇಮಠ, ಗುರುಶಾಂತಪ್ಪ ಸಿಕೇದ, ಮಲ್ಲಿಕಾರ್ಜುನ ಸಾರವಾಡ, ಗುಂಡು ವಾರದ, ಅರುಣಕುಮಾರ ಮಾಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net