ಶರನ್ನವರಾತ್ರಿ ಉತ್ಸವ ಸಂಪನ್ನ

05SPT01
ಸೋಮವಾರಪೇಟೆ ಸೋಮವೇಶ್ವರ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಬುಧವಾರ ಮೆರವಣಿಗೆ ನಡೆಯಿತು. ಮಹಿಳೆಯರು ಕಳಸಹೊತ್ತು ಭಾಗವಹಿಸಿದ್ದರು.
Published on

ಸೋಮವಾರಪೇಟೆ: ಪಟ್ಟಣದ ಬ್ರಾಹ್ಮಣ ಸಮಾಜದ ವತಿಯಿಂದ ಸೋಮೇಶ್ವರ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಶರನ್ನವರಾತ್ರಿ ಉತ್ಸವದಲ್ಲಿ 9 ದಿನಗಳ ಕಾಲ ಶ್ರೀಶಕ್ತಿ ಪಾರ್ವತಿಗೆ ವಿಶೇಷ ಪೂಜೆ ನಡೆದು ಬುಧವಾರ ವಿಧ್ಯುಕ್ತವಾಗಿ ತೆರೆ ಬಿತ್ತು.
ಮಧ್ಯಾಹ್ನ ದೇವಿಯ ವಿಗ್ರಹವನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ, ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು. ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ವೀರಗಾಸೆ, ಡೊಳ್ಳುಕುಣಿತ, ಗೊಂಬೆ ಕುಣಿತ ಜನರನ್ನು ಅಕರ್ಷಿಸಿತು. ಸಂಜೆ ಆನೆಕೆರೆ ಬಳಿ ಬನ್ನಿ ಹಂಚಿ, ಉತ್ಸವ ಮೂರ್ತಿಯನ್ನು ವಿಸರ್ಜಿಸಲಾಯಿತು.
ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್, ಕಾರ್ಯದರ್ಶಿ ಎಸ್.ಡಿ.ವಿಜೇತ್, ಪದಾಧಿಕಾರಿಗಳಾದ ಸತೀಶ್, ಎಸ್.ಆರ್. ಸೋಮೇಶ್, ಎಲ್.ಎಂ.ಪ್ರೇಮಾ, ಪಂಕಜಾ, ಲಕ್ಷ್ಮೀ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net