

ಬಸವಕಲ್ಯಾಣ: ಅಂತಾರಾಷ್ಟಿಯ ಲಿಂಗಾಯತ ಧರ್ಮಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದಿಂದ ಭಾನುವಾರ ಸಂಜೆ 6ಕ್ಕೆ ಮಾಸಿಕ ಶರಣು ಶರಣಾರ್ಥಿ ಸಮಾವೇಶ ಹಾಗೂ ಶರಣ ಜೀವನ ಕುರಿತು ಚಿಂತನ ಗೋಷ್ಠಿ ಸಮಾರಂಭ ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಪೂಜ್ಯ ಗಂಗಾಂಬಿಕಾ ಅಕ್ಕ ಸಾನ್ನಿಧ್ಯದಲ್ಲಿ, ವಿಜಯಪುರ ಕಾಖಂಡಕಿ ಗುರುದೇವ ಆಶ್ರಮದ ಶ್ರೀ ಶಿವಯೋಗಿಶ್ವರ ಸ್ವಾಮೀಜಿ ಅನುಭಾವ ನೀಡುವರು. ಎಸ್‌ಐ ಅಲಿಸಾಬ್ ಉದ್ಘಾಟಿಸಲಿದ್ದು, ಬಿಡಿಪಿಸಿ ನಿರ್ದೇಶಕ ಅಶೋಕ ನಾಗರಾಳೆ ಅಧ್ಯಕ್ಷತೆ ವಹಿಸಲಿದ್ದಾರೆ. ವಚನ ಗಾಯನ, ವಚನ ನೃತ್ಯ ನಡೆಯಲಿದೆ.