ಶರಣರು, ಸಂತರಿಂದ ಲೋಕಕಲ್ಯಾಣ

h1-blood donate
Published on

StartFragment

ಹುಬ್ಬಳ್ಳಿ: ಮಹಾತ್ಮರು, ಶರಣರು, ಸಂತರಿಂದ ಲೋಕ ಕಲ್ಯಾಣದ ಕಾರ್ಯಗಳಾಗಿವೆ ಎಂಬುದನ್ನು ಇತಿಹಾಸದಿಂದ ತಿಳಿಯಬಹುದು ಎಂದು ಇಂಜಿನಿಯರ್ ವೀರು ಉಪ್ಪಿನ ಹೇಳಿದರು.

ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪ ಗ್ರಾಮದ ಶ್ರೀ ಲಡ್ಡುಮುತ್ಯಾ ಅಜ್ಜನವರ ಜನ್ಮ ದಿನ ನಿಮಿತ್ತ ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತಕೇಂದ್ರದ ಸಹಯೋಗದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು. ರಕ್ತದಾನದಿಂದ ದೈಹಿಕ ಮತ್ತು ಸಾಮಾಜಿಕವಾಗಿ ಪ್ರಯೋಜನವಾಗುತ್ತದೆ ಎಂದರು. ದಾಳಿಂಬೆ ಹಣ್ಣಿನಿಂದ ರಕ್ತ ಶುದ್ಧಿಯಾಗುತ್ತಿದ್ದು, ದಾಳಿಂಬೆ ಸಸಿ ದಾನಮಾಡಿದವರ ಕಾರ್ಯವನ್ನು ಶ್ಲಾಘಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮಂಜುನಾಥಗೌಡ ಮುರಳಿ, ಚಂದ್ರಶೇಖರ ಗೋಕಾಕ ಮಾತನಾಡಿದರು. ಶ್ರೀ ಲಡ್ಡುಮುತ್ಯಾ ಸಾನ್ನಿಧ್ಯ ವಹಿಸಿದ್ದರು. ಡಾ. ಎಚ್.ಒ. ಮೃತ್ಯುಂಜಯ ಆರ್ಸೆನಿಯಂ ಅಲ್ಬಮ್ ಮಾತ್ರೆ ವಿತರಿಸಿದರು. ಗ್ರಾಮದ ಈರಪ್ಪ ಹೊನ್ನಳ್ಳಿ, ಗಂಗನಗೌಡ ಮೂರಳ್ಳಿ, ಶಂಭುಲಿಂಗ ಉಪ್ಪಿನ, ಪ್ರವೀಣ ಕುಬಸದ ಇತರರು ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net