

ಕೊಳ್ಳೇಗಾಲ: 12ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳು ಇಂದಿಗೂ ಪ್ರಸ್ತುತ. ಇವೇ ನಮಗೆ ದಾರಿ ದೀಪಗಳು ಎಂದು ಸ್ತ್ರೀರೋಗ ತಜ್ಞೆ ಡಾ.ಸೋಮಪ್ರಭಾ ಹೇಳಿದರು.
ಪಟ್ಟಣದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಅಕ್ಕನ ಬಳಗದ 21ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭಲ್ಲಿ ಮಾತನಾಡಿದರು.
ಪ್ರತಿಯೊಬ್ಬರು ಶರಣರ ವಚನಗಳನ್ನು ಅರಿತು, ಅದರಂತೆ ಬಾಳ್ವೆ ಮಾಡಿದರೆ ಯಶಸ್ಸು ಕಾಣಬಹುದು. ಮಾನವ ಸಂಘ ಜೀವಿ. ಒಬ್ಬರನ್ನು ಅವಲಂಬಿಸುವುದು ಅನಿವಾರ್ಯ. ಆದ್ದರಿಂದ ನಮ್ಮ ಸುತ್ತಲಿನ ವಾತಾವರಣ ತಿಳಿಯಾಗಿರಬೇಕು ಎಂದರೆ, ಸಜ್ಜನರ ಸಹವಾಸ ಮಾಡಬೇಕಿದೆ. ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಶರಣರ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವನ ನಡೆಸಬೇಕಿದೆ ಎಂದರು
ಬಸವಣ್ಣನವರ ವಚನ ಆಧಾರಿತವಾಗಿ ಬದುಕ ಕಟ್ಟಿಕೊಂಡರೆ ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯವಂತರಾಗಬಹುದು. ಅಕ್ಕನ ಬಳಗಕ್ಕೆ ನೂತನ ಪದಾಧಿಕಾರಿಗಳ ಆಗಮನವಾಗಿದೆ. ಎಲ್ಲರಿಗೂ ಒಳ್ಳೆಯದಾಗಲಿ. ಬಳಗದ ವತಿಯಿಂದ ಸಮಾಜಮುಖಿ ಕಾರ್ಯಕ್ರಮಗಳು ಇದೇ ರೀತಿ ಮುಂದುವರಿಯಲಿ ಎಂದರು
ಮಾಜಿ ಶಾಸಕಿ ಹಾಗೂ ಅಕ್ಕನ ಬಳಗದ ಗೌರವಾಧ್ಯಕ್ಷೆ ಪರಿಮಳ ನಾಗಪ್ಪ ಮಾತನಾಡಿದರು. ಪದಗ್ರಹಣ: ಅಕ್ಕನ ಬಳಗದ ತಾಲೂಕು ಅಧ್ಯಕ್ಷೆಯಾಗಿ ಪುಷ್ಪಾ ಶಾಂತಮಲಪ್ಪ, ಗೌರವಾಧ್ಯಕ್ಷೆ ಪರಿಮಳ ನಾಗಪ್ಪ, ಸಂಸ್ಥಾಪಕ ಅಧ್ಯಕ್ಷೆ ವಿಮಲಾ ಮೂರ್ತಿ, ಉಪಾಧ್ಯಕ್ಷೆ ಅರುಣ್ ಕಾರ್ತಿಕ್, ಕಾರ್ಯದರ್ಶಿ ಪ್ರಮೀಆಳ ನಂಜಪ್ಪ, ಸಹಕಾರ್ಯದರ್ಶಿ ನಾಗವೇಣಿ ನಾಗಣ್ಣ, ಖಜಾಂಚಿ ರುದ್ರಾಂಬಪ್ರಭು, ಸಂಚಾಲಕರಾಗಿ ಜಗದಾಂಬ ಸದಾಶಿವಮೂರ್ತಿ, ಚಂಪಾ ವಿಜಯ್‌ಕುಮಾರ್, ನಿರ್ದೇಶಕರಾಗಿ ವಾಣಿರಮೇಶ್, ಶಾಂತಲಾ ರಾಜೇಶ್, ನಾಗವೇಣಿ ಮಂಜುನಾಥ್, ಕೋಮಲಾ ಸುರೇಶ್ ಪದಗ್ರಹಣ ಸ್ವೀಕರಿಸಿದರು.
ಜೆಎಸ್‌ಎಸ್ ಕಾಲೇಜಿನ ಸಹಾಯಕ ಆಡಳಿತ ಅಧಿಕಾರಿ ಎಚ್.ಬಿ.ಗಿರೀಶ್, ಅಕ್ಕನ ಬಳಗದ ನಿಕಟ ಪೂರ್ವ ತಾಲೂಕು ಅಧ್ಯಕ್ಷೆ ಕಾತ್ಯಾಯಿನಿ ಶಿವಲಿಂಗಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಮಹದೇವ ಪ್ರಸಾದ್, ಅಕ್ಕನ ಬಳಗದ ಸ್ಥಾಪಕ ಅಧ್ಯಕ್ಷೆ ವಿಮಲಾಮೂರ್ತಿ ಮತ್ತಿತರಿದ್ದರು.