ಶರಣರ ವಚನಗಳ ಅಧ್ಯಯನ ನಡೆಯಲಿ

chn
ಚಿಂಚೋಳಿ ತಾಲೂಕಿನ ನಿಡಗುಂದಾದ ಹಾರಕೂಡ ಶ್ರೀ ಚನ್ನಬಸವೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಶ್ರೀ ಗುರು ವಚನಾಮೃತ ಕೃತಿಯನ್ನು ಪ್ರಾಧ್ಯಾಪಕ ಡಾ.ಪಂಡಿತ ಬಿ.ಕೆ. ಬಿಡುಗಡೆ ಮಾಡಿದರು. ಶ್ರೀ ಶಂಕರಾನಂದ ಸ್ವಾಮೀಜಿ, ಡಾ.ವಿಜಯಕುಮಾರ ಪರೂತೆ, ಪೆÇ್ರ.ಮಲ್ಲಿಕಾರ್ಜುನ ಪಾಲಾಮೂರ, ಬಸವರಾಜ ಐನೊಳ್ಳಿ, ರೇವಣಸಿದ್ದಯ್ಯ ಸ್ವಾಮಿ ಇತರರಿದ್ದರು.
Published on

ಚಿಂಚೋಳಿ: ಧರ್ಮಕ್ಕೆ ದಯೆಯ ಕವಚ ತೊಡಿಸಿದವರು 12ನೇ ಶತಮಾನದ ಶರಣರಾಗಿದ್ದು, ಅವರ ವಚನಗಳನ್ನು ಅಧ್ಯಯನ ಮಾಡಿ ಅರ್ಥೈಸಿಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸೇಡಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಪಂಡಿತ ಬಿ.ಕೆ. ಅಭಿಪ್ರಾಯಪಟ್ಟರು.

ನಿಡಗುಂದಾದ ಹಾರಕೂಡ ಶ್ರೀ ಚನ್ನಬಸವೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಶರಣ ಸಾಹಿತ್ಯ ಪರಿಷತ್‍ನಿಂದ ಮಂಗಳವಾರ ಆಯೋಜಿಸಿದ್ದ ಸಂಗೀತ ಶಿಕ್ಷಕ ರೇವಣಸಿದ್ದಯ್ಯ ಸ್ವಾಮಿ ಅವರ `ಶ್ರೀಗುರು ವಚನಾಮೃತ' ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಯುವ ಪೀಳಿಗೆ ದೇಶದ ಸಂಸ್ಕøತಿ, ಪರಂಪರೆ ತಿಳಿದುಕೊಳ್ಳಬೇಕು. ಅಲ್ಲದೆ ವಚನ ಸಾಹಿತ್ಯವನ್ನು ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.
ಚಳಕಾಪುರದ ಸಿದ್ಧಾರೂಢ ಮಠದ ಶ್ರೀ ಶಂಕರಾನಂದ ಸ್ವಾಮೀಜಿ, ಹಿರಿಯ ಸಾಹಿತಿ ಡಾ. ವಿಜಯಕುಮಾರ ಪರೂತೆ, ಪೆÇ್ರ. ಮಲ್ಲಿಕಾರ್ಜುನ ಪಾಲಾಮೂರ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ಐನೊಳ್ಳಿ ಮಾತನಾಡಿದರು.

ಪ್ರಮುಖರಾದ ಡಾ.ಭೀಮಾಶಂಕರ ತಳವಾರ, ನಾಗೇಶ ಬಿ. ಶಿಲವಂತ, ಮರೆಪ್ಪ ಮೇತ್ರಿ, ವಿಕಾಸ ಕೊರಡಂಪಳ್ಳಿ, ರಾಮಯ್ಯ ಸ್ವಾಮಿ, ರೇವಣಸಿದ್ದಯ್ಯ ಹಿರೇಮಠ, ದಯಾನಂದ ಹಿರೇಮಠ, ಶಾಮರಾವ ಕುಂಬಾರ, ಸುದರ್ಶನರೆಡ್ಡಿ, ಗುರುನಾಥ ರಾಠೋಡ್, ಜಗದೇವಿ ಸಪ್ಪನಗೊಳ, ಮಲ್ಲಿಕಾರ್ಜುನ ಕಟ್ಟಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net