ಶರಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ

07 SIRAGUPPA 01
Published on

ಸಿರಗುಪ್ಪ: ನಗರದ ತಹಸಿಲ್ ಕಚೇರಿ ಸಭಾಂಗಣದಲ್ಲಿ ಗ್ರೇಡ್ 2 ತಹಸೀಲ್ದಾರ್ ಸತ್ಯಮ್ಮ ಅಧ್ಯಕ್ಷತೆಯಲ್ಲಿ ಜ.14ರಂದು ಶ್ರೀ ಶಿವಯೋಗಿ ಸಿದ್ದರಾಮೇಶ್ವರ, ಜ.19 ರಂದು ಮಹಾಯೋಗಿ ವೇಮನ ಹಾಗೂ ಜ.21ರಂದು ನಿಜಗುಣ ಶಿವಯೋಗಿ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಪೂರ್ವಭಾವಿ ಸಭೆ ಮಂಗಳವಾರ ನಡೆಯಿತು.

ತಾಲೂಕಿನ ಎಲ್ಲ ಕಚೇರಿ, ಶಾಲೆ-ಕಾಲೇಜ್‌ಗಳಲ್ಲಿ ಕಡ್ಡಾಯವಾಗಿ ಶರಣರ ಭಾವಚಿತ್ರಗಳನ್ನು ಇಟ್ಟು ಪೂಜೆ ಸಲ್ಲಿಸಬೇಕೆಂದು ಗ್ರೇಡ್ 2 ತಹಸೀಲ್ದಾರ್ ಸತ್ಯಮ್ಮ ಸೂಚನೆ ನೀಡಿದರು.

ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎ.ಗಾದಿಲಿಂಗಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಂ.ಸಿದ್ದಯ್ಯ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಬಿ.ಪಾಟೀಲ್, ಸಿಡಿಪಿಒ ಪ್ರದೀಪ್, ತಾಲೂಕು ದೈಹಿಕ ಶಿಕ್ಷಕರ ಪರಿವೀಕ್ಷಕ ಟಿ.ರಮೇಶ, ತಾಪಂ ವ್ಯವಸ್ಥಾಪಕಿ ಸುಜಾತ ಕೋರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net