ಶರಣರ ಬದುಕು ನಮಗೆಲ್ಲಾ ಆದರ್ಶ

12MNL1
ಮುನವಳ್ಳಿ ಪಟ್ಟಣದ ಹನುಮಾನ ಮಂದಿರದಲ್ಲಿ ಸೋಮಶೇಖರಮಠದಿಂದ ಹಮ್ಮಿಕೊಂಡಿದ್ದ ಶ್ರಾವಣ ಶಿವಾನುಭವದಲ್ಲಿ ಪ್ರೊ. ರಮೇಶ ಮುರಂಕರ ಮಾತನಾಡಿದರು. ಮುರುಘೇಂದ್ರ ಸ್ವಾಮೀಜಿ, ಸವಿತಾ ಬಾಳಿ, ಅನ್ನಪೂರ್ಣಾ ಹಿರೇಮಠ ಇತರರು ಇದ್ದರು.
Published on

ಮುನವಳ್ಳಿ: ಬಸವಾದಿ ಶರಣರ ಬದುಕನ್ನು ನಾವೆಲ್ಲರೂ ಅನುಸರಿಸಬೇಕಿದೆ. ಪರಮಾತ್ಮನ ಸಾಕ್ಷಾತ್ಕಾರ ಮಾಡಿಕೊಳ್ಳುವುದು ಶರಣರ ಗುರಿಯಾಗಿತ್ತು. ಹೀಗಿದ್ದರೂ ಅವರು ಎಲ್ಲೂ ಸಂಸಾರಿಕ ಜವಾಬ್ದಾರಿ ಮತ್ತು ಕಾಯಕದಿಂದ ವಿಮುಕ್ತರಾಗಿರಲಿಲ್ಲ. ಕಾಯಕವೇ ಕೈಲಾಸ ಎಂದು ಜೀವನ ನಡೆಸಿದ್ದರು ಎಂದು ಯಕ್ಕುಂಡಿ ಸರ್ಕಾರಿ ಕಾಲೇಜಿನ ಕನ್ನಡ ಉಪನ್ಯಾಸಕ ರಮೇಶ ಮುರಂಕರ ಹೇಳಿದರು. ಪಟ್ಟಣದ ಗಾಂಧಿ ನಗರದ ಹನುಮಾನ ಮಂದಿರದಲ್ಲಿ ಶ್ರಾವಣ ಮಾಸದ ನಿಮಿತ್ತ ಸೋಮಶೇಖರಮಠದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಶ್ರಾವಣ ಶಿವಾನುಭವ ಕಾರ್ಯಕ್ರಮದಲ್ಲಿ ‘ಶರಣರ ದಾಂಪತ್ಯ ಚಿಂತನೆ’ ವಿಷಯದ ಕುರಿತು ಮಾತನಾಡಿದರು. ಆಧ್ಯಾತ್ಮ ಹಾಗೂ ಸಂಸಾರ ಒಂದಕ್ಕೊಂದು ವಿರುದ್ಧ ಎಂದು ಕಂಡರೂ ಅವು ಪೂರಕ ಎಂಬುದನ್ನು ತೋರಿಸಿಕೊಟ್ಟವರು ಶಿವಶರಣ ದಂಪತಿಗಳು. ಗಂಡು-ಹೆಣ್ಣಿಗೆ, ಹೆಣ್ಣು-ಗಂಡಿಗೆ ಪ್ರತಿಸ್ಪರ್ಧಿಯಾಗದೆ ಒಬ್ಬರು ಇನ್ನೊಬ್ಬರಿಗೆ ಪ್ರೇರಕ ಶಕ್ತಿಯಾಗಿ ಪೂರಕವಾಗಿ ನಿಲ್ಲುತ್ತಾರೆ. ಇಂತ ವಿಚಾರ ಪ್ರಸ್ತುತ ಸಮಾಜದ ದಾಂಪತ್ಯ ಬದುಕಿಗೆ ತುಂಬಾ ಅವಶ್ಯಕವಾಗಿದೆ ಎಂದರು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ, ಪವಿತ್ರವಾದ ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನಗಳನ್ನು ಆಲಿಸುವುದರಿಂದ ಪುಣ್ಯ ಲಭಿಸುತ್ತದೆ ಎಂದರು. ಗಂಗಾಬಿಕಾ-ನೀಲಾಂಬಿಕಾ ಬಳಗದ ಅಧ್ಯಕ್ಷೆ ಸವಿತಾ ಬಾಳಿ, ಅನ್ನಪೂರ್ಣಾ ಹಿರೇಮಠ, ಮಂಗಲಾ ಯರಗುದ್ದಿ, ರೇಣುಕಾ ಚವ್ಹಾಣ, ಮಹಾದೇವ ಗೋಪಶೆಟ್ಟಿ, ಮನೋಹರ ನಾಯ್ಕ, ವೈ.ಎಫ್. ಶ್ಯಾನಭೋಗ, ಶ್ರೀಶೈಲ ಹಂಜಿ, ಪುರಸಭೆ ಸದಸ್ಯ ಗುರುಶಾಂತ ಚಂದರಗಿ, ಶಿವಪುತ್ರಪ್ಪ ಕೆಳಗಡೆ, ಮಂಜುನಾಥ ಪಾಟೀಲ, ಎಂ.ಎಚ್.ಪಾಟೀಲ, ಗಂಗಾಧರ ಗೊರಾಬಾಳ, ಬಿ.ಬಿ.ಹುಲಿಗೊಪ್ಪ, ಪ್ರಶಾಂತ ತುಳಜಣ್ಣವರ, ಐ.ಕೆ.ಮಠಪತಿ, ಶ್ರೀಶೈಲ ಹಿರೇಮಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net