ಶರಣರ ಪ್ರಸಾದ ತತ್ವ ವಿಶ್ವಕ್ಕೆ ಮಾದರಿ

15blk2
 ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಹಮ್ಮಿಕೊಂಡಿದ್ದ ೪೮೬ನೇ ಶಿವಾನುಭವ ಗೋಷ್ಠಿಯಲ್ಲಿ ಸಾಮೂಹಿಕ ಇಷ್ಟಲಿಂಗ ಗ್ರಂಥವನ್ನು ಹಿರಿಯ ಸಾಹಿತಿ ಡಾ.ಸೋಮನಾಥ ಯಾಳವಾರ ಬಿಡುಗಡೆಗೊಳಿಸಿದರು. ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಇತರರಿದ್ದರು.
Published on

ಭಾಲ್ಕಿ: ಬಸವಾದಿ ಶರಣರು ಅರುಹಿದ ಪ್ರಸಾದ ತತ್ವ ವಿಶ್ವಕ್ಕೆ ಮಾದರಿಯಾಗಿದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ನ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶುಕ್ರವಾರ ಆಯೋಜಿಸಿದ್ದ ೪೮೬ನೇ ಶಿವಾನುಭವಗೋಷ್ಠಿ, ಬಿಬ್ಬಿ ಮಾಚಯ್ಯನವರ ಸ್ಮರಣೆ ಮತ್ತು ಸಾಮೂಹಿಕ ಇಷ್ಟಲಿಂಗ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ವಸ್ತು, ಒಡವೆ, ಸಂಪತ್ತು ಇಲ್ಲದಿದ್ದರೂ ಜೀವಿಗಳು ಬದುಕಬಲ್ಲವು. ಆದರೆ ಅನ್ನ, ಆಹಾರ ಇಲ್ಲದಿದ್ದರೆ ಬದುಕಲಾಗದು. ಆದ್ದರಿಂದ ಮನುಷ್ಯನ ಬದುಕಿಗೆ ಮೂಲಾಧಾರವಾದ ಅನ್ನವೇ ಪ್ರಸಾದ ಅದುವೇ ಪರಬ್ರಹ್ಮ ಅಂಥ ಪ್ರಸಾದದ ಒಂದಗುಳ ಕೆಡಿಸಲಾಗದು ಎಂದು ತಿಳಿಸಿದರು.

ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಸದಾಶಯ ನುಡಿಗಳು ನುಡಿದರು. ಶ್ರೀ ಪ್ರಭುಲಿಂಗ ಸ್ವಾಮೀಜಿ, ಶ್ರೀ ಸದಾಶಿವ ಸ್ವಾಮೀಜಿ, ಶ್ರೀ ಬಸವಮುರುಘ ರಾಜೇಂದ್ರ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

ಹುಮನಾಬಾದ್ ಬಸವ ಸೇವಾ ಪ್ರತಿಷ್ಠಾನ ಅಧ್ಯಕ್ಷ ಚನ್ನಬಸಪ್ಪ ವಡ್ಡನಕೇರೆ ಬಿಬ್ಬಿ ಬಾಚಯ್ಯ ಶರಣರ ಜೀವನ ಮತ್ತು ಸಂದೇಶ ಕುರಿತು ಅನುಭಾವ ನೀಡಿದರು.

ಸುನೀತಾ ವಿಜಯಕುಮಾರ ಧೂಳೆ ದಾಡಗಿ ಅವರ ದಾಸೋಹದಲ್ಲಿ ಪ್ರಕಟವಾದ ಸಾಮೂಹಿಕ ಪ್ರಾರ್ಥನೆ ಗ್ರಂಥ ಡಾ.ಸೋಮನಾಥ ಯಾಳವಾರ ಲೋಕಾರ್ಪಣೆ ಮಾಡಿದರು.

ಬಸ್ ಡಿಪೋ ಘಟಕದ ವ್ಯವಸ್ಥಾಪಕ ಭದ್ರಪ್ಪ ಹುಡಗೆ ಅಧ್ಯಕ್ಷತೆ ವಹಿಸಿದ್ದರು. ಡಾ.ರಾಜರಾಜೇಶ್ವರಿ ಡಾ.ವೀರಭದ್ರ ಕಲ್ಯಾಣಿ ಕಲಬುರಗಿ ಅವರಿಂದ ಭಕ್ತಿದಾಸೋಹ ನೆರವೇರಿತು.

ಹಾವಗೆಪ್ಪ ಧೂಳೆ, ಶಿವಕುಮಾರ ತಮಾಸಂಗೆ, ಶಿವಕುಮಾರ ಧೂಳೆ, ರಾಜಕುಮಾರ ಕೋಟೆ, ಮಲ್ಲಪ್ಪ ಧೂಳೆ, ದಶರಥರಾವ ವಳಸಂಗೆ, ಮಲ್ಲಿಕಾರ್ಜುನ ಸಂಗಮಕರ, ದೀಪಕ ಕೊಡಗೆ, ರುದ್ರವಾಡಿ ಮಾಣಿಕಪ್ಪ ಕೋಟೆ ಇತರರಿದ್ದರು. ದಾಡಗಿ ಬಸವೇಶ್ವರ ಭಜನಾ ಮಂಡಳಿ ಅವರಿಂದ ವಚನ ಭಜನೆ ನಡೆಯಿತು. ಧನರಾಜ ವಾಲೆ ದಾಡಗಿ ಧರ್ಮಗ್ರಂಥ ಪಠಣ ಮಾಡಿದರು. ನಾಗಶೆಟ್ಟಿ ಚೋಳಾ ದಾಡಗಿ ಸ್ವಾಗತಿಸಿದರು. ವೀರಣ್ಣ ಕುಂಬಾರ ನಿರೂಪಣೆ ಮಾಡಿದರು. ದೀಪಕ ಠಮಕೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net