ಶರಣರ ನಾಡಿನಲ್ಲಿ ಇಂದು ಕುರುಬ ಸಮಾವೇಶ

web 4
Published on

ಶಿಕಾರಿಪುರ: ಕುರುಬ ಸಮಾಜದ ಎಸ್ಟಿ ಹೋರಾಟ ಒಂದು ಹೊಸ ಆಯಾಮ ಪಡೆದಿದ್ದು ಪೂರಕವಾಗಿ ಜ.7ರಂದು ಶರಣರ ನಾಡು ಶಿಕಾರಿಪುರದಲ್ಲಿ ಹ್ಮಮಿೊಂಡಿರá-ವ ಸಮಾವೇಶ ರಂಗೇರುತ್ತಿದೆ.

ಈಗಾಗಲೇ ಎಸ್ಟಿ ಹೋರಾಟ ಸಮಿತಿಯಿಂದ ರಾಜ್ಯ ಖಜಾಂಚಿ ಕೆ.ಇ.ಕಾಂತೇಶ್ ಮತ್ತು ತಾಲೂಕು ಅಧ್ಯಕ್ಷ ಕಬಾಡಿ ರಾಜಣ್ಣ ನೇತೃತ್ವದಲ್ಲಿ ತಾಲೂಕು ಹಾಗೂ ತಾಲೂಕಿಗೆ ಹೊಂದಿಕೊಂಡ ಹಿರೇಕೆರೂರು, ಹೊನ್ನಾಳಿ ಭಾಗದಲ್ಲಿ ಜನಸಂಪರ್ಕ ಮಾಡಲಾಗಿದೆ. ಸಮುದಾಯದ ಮನೆ ಮನೆಗಳಿಗೆ ಭೇಟಿ ನೀಡಿ ಸಮಾವೇಶದ ಅರಿವು ಮೂಡಿಸಲಾಗಿದೆ.

ಶಿವಮೊಗ್ಗ ವಿಭಾಗ ಮಟ್ಟದ ಸಮಾವೇಶ ಇದಾಗಿದ್ದು ಹೊಸ ಸಂತೆ ಮೈದಾನದಲ್ಲಿ 450 ಅಡಿ ಉದ್ದ, 150 ಅಡಿ ಅಗಲದ ಬೃಹತ್ ವೇದಿಕೆ ಸಿದ್ಧವಾಗಿದೆ. 15,000 ಕ್ಕೂ ಹೆಚ್ಚು ಆಸನ ವ್ಯವಸ್ಥೆ ಮಾಡಲಾಗಿದೆ. ವಿಶೇಷವಾಗಿ ವೇದಿಕೆ ನಿರ್ವಣವಾಗಿದ್ದು ಬಂದವರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಊಟ, ಉಪಾಹಾರ, ನೀರಿನ ವ್ಯವಸ್ಥೆ ಮಾಡಲಾಗಿದೆ.

ಗುರುವಾರ ಬೆಳಗ್ಗೆ 11ಕ್ಕೆ ಕಾಗಿನೆಲೆ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮತ್ತು ಹೊಸದುರ್ಗದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಮಾವೇಶ ಇದಾಗಿದ್ದು ಈ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಎಚ್. ವಿಶ್ವನಾಥ್ ಮತ್ತು ಮಾಜಿ ಸಂಸದ ಕೆ. ವಿರುಪಾಕ್ಷಪ್ಪ, ಜಿಪಂ ಸದಸ್ಯ ಕೆ.ಇ.ಕಾಂತೇಶ್, ಎಸ್ಟಿ ಹೋರಾಟ ಸಮಿತಿಯ ಪದಾಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಭಾಗವಹಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net