ಶರಣರ ತತ್ವಾದರ್ಶ ಪಾಲಿಸೋಣ

26MDG1 MANGALOTSAVA
Published on

ಮುಂಡರಗಿ: ಕಾಯಕ ಪ್ರಾಮಾಣಿಕತೆಯಿಂದ ಕೂಡಿರಬೇಕು. ಕಾಯಕ ತತ್ವಕ್ಕೆ ಕೂಡ ಶರಣರು ದೈವತ್ವ ಕಲ್ಪಿಸಿದ್ದಾರೆ. ಶರಣರ ತತ್ವಾದರ್ಶಗಳ ಸಂದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು. ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಸೋಮವಾರ ಏರ್ಪಡಿಸಿದ್ದ ಶರಣ ಚರಿತಾಮೃತ ಪ್ರವಚನ ಮಂಗಲೋತ್ಸವ ಹಾಗೂ ಅಮೃತ ಮಹೋತ್ಸವ ಸಂಭ್ರಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಅತ್ತಿವೇರಿ ಬಸವಧಾಮದ ಶ್ರೀ ಬಸವೇಶ್ವರಿ ಮಾತಾಜಿ, ಡಾ. ಬಸವಾನಂದ ಸ್ವಾಮೀಜಿ, ಶ್ರೀ ಗೋಣಿರುದ್ರಮುನಿ ಸ್ವಾಮೀಜಿ, ಪ್ರವಚನ ಸಮಿತಿ ಅಧ್ಯಕ್ಷ ಪಾಲಾಕ್ಷಿ ಗಣದಿನ್ನಿ ಮಾತನಾಡಿದರು. ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ವೈದ್ಯನಾಥ ಸಾಲಿ, ಗವೀಶ ಶಶಿಮಠ, ಕಿರಣ ಪಾಂಗಿರೆ ಇತರರನ್ನು ಸತ್ಕರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net