ಶರಣರ ತತ್ವ ಅಳವಡಿಸಿಕೊಳ್ಳಿ

oplus_131074
 ಮನ್ನಾಎಖೇಳ್ಳಿಯಲ್ಲಿ ಸೋಮವಾರ ಆಯೋಜಿಸಿದ್ದ ಬಸವಧರ್ಮ ಸಮಾವೇಶ ಹಾಗೂ ಸಂಗೀತ, ನಾಟಕೋತ್ಸವವನ್ನು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ ಮೂರ್ತಿ ಉದ್ಘಾಟಿಸಿದರು. ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ರಾಜೇಶ್ವರ ಶಿವಾಚಾರ್ಯರು, ಮಾತೆ ಮೈತ್ರಾದೇವಿ ತಾಯಿ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಪ್ರಮುಖರಾದ ಸೋಮನಾಥ ಪಾಟೀಲ್, ಬಸವರಾಜ ಧನ್ನೂರ ಇತರರಿದ್ದರು.
Published on

ಚಿಟಗುಪ್ಪ: ಮನಸ್ಸುನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕಾದರೆ ಬಸವಾದಿ ಶರಣರ ತತ್ವಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಬೆಂಗಳೂರಿನ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ ಮೂರ್ತಿ ಹೇಳಿದರು.

ಮನ್ನಾಎಖೇಳ್ಳಿ ಗ್ರಾಮದ ಬಸವ ಮಹಾಮಠದಲ್ಲಿ ಸೋಮವಾರ ಆಯೋಜಿಸಿದ್ದ ಬಸವಧರ್ಮ ಸಮಾವೇಶ ಹಾಗೂ ಸಂಗೀತ, ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರು ೧೨ನೇ ಶತಮಾನದಲ್ಲಿಯೇ ಸಮಸಮಾಜ ನಿರ್ಮಿಸಿದ ಮಹಾ ಪುರುಷ. ವಿಶ್ವದ ಪ್ರಥಮ ಪಾರ್ಲಿಮೆಂಟï ಎಂದರೆ ೧೨ನೇ ಶತಮಾನದಲ್ಲಿ ಶರಣರು ಕಟ್ಟಿದ ಅನುಭವ ಮಂಟಪ. ಈ ಮೂಲಕ ಎಲ್ಲರೂ ಸಮಾನರು ಎಂಬ ತತ್ವ ನೀಡಿದ್ದಾರೆ. ಆದ್ದರಿಂದ ಬಸವ ಪರಂಪರೆ ಅನುಸರಿಸಬೇಕು. ಇದರಿಂದ ಪರಸ್ಪರ ನಂಬಿಕೆ, ವಿಶ್ವಾಸದಿಂದ ಬದುಕಲು ಸಾಧ್ಯ ಎಂದರು.

ಭಾಲ್ಕಿಯ ಶ್ರೀ ಗುರುಬಸವ ಪಟ್ಟದ್ದೇವರು, ಏಳಸಂಗಿ ಸಿದ್ಧಾರೂಢ ಮಠದ ಶ್ರೀ ಪರಮಾನಂದ ಸ್ವಾಮಿ, ತಡೋಳಾದ ಶ್ರೀ ರಾಜೇಶ್ವರ ಶಿವಾಚಾರ್ಯರು, ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಪೂಜ್ಯ ಡಾ.ಗಂಗಾಂಬಿಕೆ ಅಕ್ಕ, ಬೆಳ್ಳೂರ ಸಚ್ಚಿದಾನಂದ ಸಿದ್ಧಾರೂಢ ಮಠದ ಶ್ರೀ ಅಮೃತಾನಂದಮಯಿ ಮಾತನಾಡಿ, ಮಾನವನ ಸುಂದರ ಹಾಗೂ ಸಾರ್ಥಕ ಬದುಕಿಗೆ ಬೇಕಾಗಿರುವ ತತ್ವ ಬಸವಾದಿ ಶರಣರು ನೀಡಿದ್ದಾರೆ. ಅವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಮಾನವರ ಕಲ್ಯಾಣಕ್ಕಾಗಿ ಅಮೂಲ್ಯವಾದ ತತ್ವಗಳನ್ನು ನೀಡಿದ ಬಸವಣನವರು ವಿಶ್ವಗುರು ಆಗಿದ್ದಾರೆ. ಅದರಂತೆ ಪ್ರಧಾನಿ ಮೋದಿಯವರು ಉತ್ತಮ ಆಡಳಿತದೊಂದಿಗೆ ದೇಶವನ್ನು ವಿಶ್ವಗುರುವಾಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.

ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಕಾರ್ಯಕ್ಕೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ೬ ಕೋಟಿ ರೂ. ನೀಡಿದ್ದರು. ಶರಣರ ತತ್ವದ ವ್ಯಾಪಕ ಪ್ರಚಾರ ನಡೆಯಬೇಕು. ನಮ್ಮ ಭಾಗದಲ್ಲಿ ಸುಮಾರು ವರ್ಷಗಳಿಂದ ಬಸವತತ್ವ ಪ್ರಚಾರದ ಜತೆಗೆ ಸಾಮಾಜಿಕ, ಶೈಕ್ಷಣಿಕ ಸೇವೆ ಮಾಡಿಕೊಂಡು ಬರುತ್ತಿರುವ ಮಾತೆ ಮೈತ್ರಾದೇವಿ ತಾಯಿ ಅವರ ಕಾರ್ಯ ಅಮೋಘವಾಗಿದೆ. ಇದಕ್ಕೆ ಭಾಲ್ಲಿಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಗುರುಬಸವ ಪಟ್ಟದ್ದೇವರು ತಾಯಿ ಸೇವೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ನಾವೆಲ್ಲರೂ ಇಲ್ಲಿನ ಧರ್ಮ ಕಾರ್ಯಕ್ಕೆ ಇನ್ನೂ ಹೆಚ್ಚಿನ ಸಹಕಾರ ನೀಡೋಣ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲï ಮಾತನಾಡಿದರು. ಜಾಗತಿಕ ಲಿಂಗಾಯತ ಸಮಿತಿ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ, ಸಾಹಿತಿ ಐ.ಆರ್.ಮಠಪತಿ ಶರಣರ ತತ್ವ, ಆಚರಣೆ ಕುರಿತು ಅನುಭಾವ ನೀಡಿದರು.

ಬಸವಕಲ್ಯಾಣದ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ, ಬಸವ ಮಹಾಮಠದ ಅಧ್ಯಕ್ಷೆ ಮಾತೆ ಮೈತ್ರಾದೇವಿತಾಯಿ ನೇತೃತ್ವ ವಹಿಸಿದ್ದರು. ಪ್ರಮುಖರಾದ ಡಾ.ಸಂಜೀವಕುಮಾರ ಜುಮ್ಮಾ, ಸೋಮಶೇಖರ ಪಾಟೀಲ್ ಗಾದಗಿ, ಡಾ.ಉಮಾ ದೇಶಮುಖ, ಡಾ.ಧನರಾಜ ನೀಲಾ, ರಾಜಶೇಖರ ಶೆಟಕಾರ, ಗುರುನಾಥ ರಾಜಗೀರಾ, ವಿಶ್ವನಾಥ ಪಾಟೀಲï, ನಾಗರಾಜ ಶೇರಿಕಾರ, ಶಂಕರರಾವ ಪಾಟೀಲ್ ಬನ್ನಳ್ಳಿ, ರಾಜಕುಮಾರ ತರಿ, ಶಿವಪುತ್ರಪ್ಪ ಸಾದಾ, ನಾಗೇಂದ್ರಪ್ಪ ವರವಟ್ಟಿ, ಸಂತೋಷ ಹಳ್ಳಿಖೇಡ, ಸಂತೋಷ ಕಮಲಾಪುರ, ರಾಜು ಪಂಚಾಳ, ನವಲಿಂಗ ಪಾಟೀಲ್, ಶಾರದಾ ಪಾಟೀಲ್, ಶಿವರಾಜ ಮನ್ನಳ್ಳಿ ಇತರರಿದ್ದರು. ರೇವಣಸಿದ್ದಪ್ಪ ಡೊಂಗರಗಾಂವ ಸ್ವಾಗತಿಸಿದರು. ವೈಜಿನಾಥ ಸಜ್ಜನಶೆಟ್ಟಿ ನಿರೂಪಣೆ ಮಾಡಿದರು.

ಸ್ಥಬ್ದಚಿತ್ರದ ಭವ್ಯ ಮೆರವಣಿಗೆ: ಗ್ರಾಮದ ಬಸವೇಶ್ವರ ವೃತ್ತದಿಂದ ಬಸವ ಮಹಾಮಠದವರಗೆ ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಹಾಗೂ ಬಸವಾದಿ ಶರಣರ ಸ್ಥಬ್ದಚಿತ್ರದ ಭವ್ಯ ಮೆರವಣಿಗೆ ಜರುಗಿತು. ಮೆರವಣಿಗೆಯುದ್ದಕ್ಕೂ ನಾನಾ ಕಲಾ ತಂಡಗಳು, ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಕಣ್ಮನ ಸೆಳೆದವು. ಹಲವಾರು ಶ್ರೀಗಳು, ಗಣ್ಯರು, ಭಕ್ತರು ಪಾಲ್ಗೊಂಡಿದ್ದರು.

ಬಸವಾದಿ ಶರಣರ ಅತ್ಯಮೂಲ್ಯವಾದ ತತ್ವಗಳ ವಿಚಾರಧಾರೆ ಮಕ್ಕಳಲ್ಲಿ ಮೂಡಿಸಬೇಕಾಗಿದೆ. ಪ್ರತಿಯೊಬ್ಬರೂ ಬಸವ ಪ್ರಜ್ಞೆ ಹೊಂದಿ ಜೀವನದಲ್ಲಿ ಅಳವಡಿಸಿಕೊಂಡರೆ ಸಾರ್ಥಕ ಬದುಕು ಕಟ್ಟಿಕೊಳ್ಳಲು ಸಾಧ್ಯ. ಬಸವ ಮಹಾಮಠದ ಮೂಲಕ ಈ ಭಾಗದಲ್ಲಿ ಹಲವಾರು ದಶಕಗಳಿಂದ ಬಸವಧರ್ಮ ಜಾಗೃತಿ ಮೂಡಿಸುವ ಜತಗೆ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಒದಗಿಸುವ ಶೈಕ್ಷಣಿಕ ಕಾರ್ಯ ಮಾಡುತ್ತಿರುವ ಮಾತೆ ಮೈತ್ರಾದೇವಿ ತಾಯಿ ಸೇವೆ ಅಪಾರವಾಗಿದೆ.

| ಶ್ರೀ ಗುರುಬಸವ ಪಟ್ಟದ್ದೇವರು

ಪೀಠಾಧಿಪತಿ, ಹಿರೇಮಠ ಸಂಸ್ಥಾನ ಭಾಲ್ಕಿ

============

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net