ಶರಣಬಸವ ವಿವಿ ಅಧ್ಯಾಪಕರಿಗೆ ಅಭಿನಂದನೆ

SBVV
Published on

ಕಲಬುರಗಿ: ಬಿ.ಫಾರ್ಮಾ ಮತ್ತು ಡಿ.ಫಾರ್ಮಾ ಕೋರ್ಸ್ಗೆ ಅನುಮೋದನೆ ದೊರೆತಿರುವ ಹಿನ್ನೆಲೆಯಲ್ಲಿ ಶರಣಬಸವೇಶ್ವರ ಸಂಸ್ಥಾನ ಮಹಾಮನೆಯಲ್ಲಿ ಶರಣಬಸವ ವಿವಿ ಅಧ್ಯಾಪಕ ತಂಡವನ್ನು ಶನಿವಾರ ಸತ್ಕರಿಸಿ, ಗೌರವಿಸಲಾಯಿತು.
ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆದ ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ವಿದ್ಯಾಭಂಢಾರಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಡಾ.ದಾಕ್ಷಾಯಿಣಿ ಅಪ್ಪ ಅವರು ವಿವಿ ಅಧ್ಯಾಪಕರನ್ನು ಸತ್ಕರಿಸಿದರು.
ಅಧ್ಯಾಪಕರು, ಸಿಬ್ಬಂದಿಯನ್ನು ಡಾ ಅಪ್ಪಾಜಿ ಮತ್ತು ಡಾ ಅವ್ವಾಜಿ ಮುಕ್ತ ಕಂಠದಿAದ ಶ್ಲಾಘಿಸಿ, ಅಭಿನಂದಿಸಿದರು. ಸಂಸ್ಥಾನದ ೯ನೇ ಪೀಠಾಧಿಪತಿ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಆಶೀರ್ವದಿಸಿದರು. ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನೀಲಕುಮಾರ್ ಬಿಡವೆ ಮಾತನಾಡಿ, ಅಗತ್ಯ ಮೂಲ ಸೌಲಭ್ಯ ಒದಗಿಸುವಲ್ಲಿ ಡೀನ್ ಡಾ.ಲಕ್ಷಿö್ಮÃ ಪಾಟೀಲ್ ಮಾಕಾ ನೇತೃತ್ವದ ತಂಡದ ಪ್ರಯತ್ನ ಶ್ಲಾಘನೀಯ. ಈ ಎರಡೂ ಹೊಸ ಕೋರ್ಸ್ಗಳಿಗೆ ಅನುಮೋದನೆ ನೀಡಲು ಕೋರಿದ ಎಲ್ಲಾ ಅಗತ್ಯ ಮಾಹಿತಿ ಒದಗಿಸಿದರು ಎಂದು ಹೇಳಿದರು.
ಅಧ್ಯಾಪಕರ ಈ ಸಾಧನೆಗಾಗಿ ಕುಲಪತಿ ಡಾ.ನಿರಂಜನ್ ನಿಷ್ಠಿ ಮತ್ತು ಸಮಕುಲಪತಿ ಪ್ರೊ.ವಿ.ಡಿ.ಮೈತ್ರಿ ಅಭಿನಂದಿಸಿದರು. ಡಾ.ಲಕ್ಷಿö್ಮÃ ಪಾಟೀಲ್ ಮಾಕಾ, ಔಷಧ ವಿಜ್ಞಾನ ವಿಭಾಗದ ಡೀನ್ ಡಾ.ಮಹಾದೇವಪ್ಪ ರಾಂಪುರೆ, ಶಿವಶೇಖರ ಮಂಗಲಗಿ, ಗೋದುತಾಯಿ ಮಹಿಳಾ ಇಂಜಿನಿಯರಿAಗ್ ಕಾಲೇಜಿನ ಅಧ್ಯಾಪಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net