ಶರಣನ ರಥ ವೈಭವ ಮಾ.19ರಂದು

DSC_9916
Published on

ಕಲಬುರಗಿ: ಶ್ರೀ ಶರಣಬಸವೇಶ್ವರರ ೨೦೩ನೇ ಮಹಾದಾಸೋಹ ಯಾತ್ರೆ ನಿಮಿತ್ತ ಮಾ.೧೯ರಂದು ಸಂಜೆ ೬ಗಂಟೆಗೆ ಲಕ್ಷಾಂತರ ಭಕ್ತರ ಮಧ್ಯೆ ಅದ್ದೂರಿ ರಥೋತ್ಸವ ನೆರವೇರಲಿದ್ದು, ಮಾ.೧೮ರಂದು ಸಂಜೆ ೬ಕ್ಕೆ ಉಚ್ಛಾಯಿ ಉತ್ಸವ ನಡೆಯಲಿದೆ ಎಂದು ಮಹಾದಾಸೋಹ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ, ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ, ಚಿ.ದೊಡ್ಡಪ್ಪ ಅಪ್ಪ ತಿಳಿಸಿದರು.

ಸಂಸ್ಥಾನದಲ್ಲಿ ಸೋಮವಾರ ಏರ್ಪಡಿಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಯಕ, ದಾಸೋಹ ಜೀವನ ನಡೆಸಿದ ಶ್ರೇಷ್ಠ ಶರಣ ಶ್ರೀ ಶರಣಬಸವೇಶ್ವರರ ೨೦೩ನೇ ಪುಣ್ಯಸ್ಮರಣೆ ಮತ್ತು ಮಹಾದಾಸೋಹ ಪೀಠಾಧಿಪತಿಗಳ ಪೀಠಾರೋಹಣವನ್ನು ಸ್ಮರಿಸಲಾಗುತ್ತೆ ಎಂದು ಹೇಳಿದರು.

ನೂರಾರು ವರ್ಷದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ, ಸಂಸ್ಕೃತಿ ಮುಂದುವರಿಸಿಕೊAಡು ಬರಲಾಗುತ್ತಿದ್ದು, ಬ್ರಹ್ಮಪುರದಲ್ಲಿ ಗಂಗಾಪೂಜೆಯೊAದಿಗೆ ಜಾತ್ರೆಯ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಮಾ.೧೯ರಂದು ಸಂಜೆ ೬ಕ್ಕೆ ಪೂಜ್ಯ ಶ್ರೀ ಶರಣಬಸವೇಶ್ವರರು ಬಳಸುತ್ತಿದ್ದ ಪರುಷ ಬಟ್ಟಲು, ಲಿಂಗಸಜ್ಜಿಕೆಗಳನ್ನು ಭಕ್ತರಿಗೆ ದರ್ಶನ ಮಾಡಿಸಿ, ಶಂಕನಾದ ಮೊಳಗಿಸುವುದರೊಂದಿಗೆ ರಥೋತ್ಸವಕ್ಕೆ ಚಾಲನೆ ದೊರೆಯಲಿದೆ ಎಂದು ತಿಳಿಸಿದರು.

ಮಾ.೧೮ರಂದು ಆರಂಭವಾಗುವ ಜಾತ್ರಾ ಮಹೋತ್ಸವವು ಯುಗಾದಿವರೆಗೆ ನಡೆಯಲಿದೆ. ಕರ್ನಾಟಕ ಸೇರಿ ಆಂದ್ರಪ್ರದೇಶ, ತೆಲಂಗಾಣ, ಮಹಾರಾಷ್ಟçದ ಲಕ್ಷಾಂತರ ಭಕ್ತರು ಭಾಗವಹಿಸಲಿದ್ದು, ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವಿಶೇಷವಾಗಿ ದೀಪಾಲಂಕಾರ ಮಾಡಲಾಗಿದೆ ಎಂದು ಹೇಳಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿವಿ ಕುಲಪತಿ ಡಾ.ಅನೀಲ ಬಿಡವೆ, ಟಿ.ಶಿವಾನಂದನ್, ಕು.ಶಿವಾನಿ ಅಪ್ಪ, ಕು.ಮಹೇಶ್ವರಿ ಅಪ್ಪ, ಕು.ಕೋಮಲಾ ಅಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net