ಶರಣನ ದೇವಸ್ಥಾನದಲ್ಲಿ ಪ್ರವಚನ ಆರಂಭ

Sharanabasaveshwar
Published on

ಕಲಬುರಗಿ: ನಗರದ ಶರಣಬಸವೇಶ್ವರ ದಾಸೋಹ ಸಂಸ್ಥಾನದಲ್ಲಿನ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಆ.೪ ರಿಂದ ಶ್ರಾವಣ ಮಾಸದ ನಿಮಿತ್ತ ಶರಣಬಸವೇಶ್ವರ ಸಂಸ್ಥಾನದ ವಿವಿಧ ಕ್ಷೇತ್ರಗಳ ಕೊಡುಗೆಗಳ ಕುರಿತು ೩೦ ದಿನಗಳ ಸುದೀರ್ಘ ವಾರ್ಷಿಕ ಪ್ರವಚನ ಶಿವಾನುಭವ ಉಪನ್ಯಾಸ ಮಾಲಿಕೆ ನಡೆಯಲಿದೆ.
ಶರಣಬಸವೇಶ್ವರ ಸಂಸ್ಥಾನ ಮತ್ತು ಅಖಿಲ ಭಾರತ ಶಿವಾನುಭವ ಮಂಟಪವು ಪ್ರತಿ ವರ್ಷವೂ ಶ್ರಾವಣ ಮಾಸದ ಪ್ರಯುಕ್ತ ಮಹಾದಾಸೋಹಿ ಶರಣಬಸವೇಶ್ವರರ ಪುಣ್ಯಸ್ಮರಣೆ, ಸಂಸ್ಥಾನದ ೭ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ ಅವರ ಪುಣ್ಯಸ್ಮರಣೋತ್ಸವ ಹಾಗೂ ಸಂಸ್ಥಾನದ ೮ನೇ ಪೀಠಾಧಿಪತಿ ಶ್ರೀ ಡಾ.ಶರಣಬಸವಪ್ಪ ಅಪ್ಪ ಪೀಠಾಧಿಪತಿಯಾಗಿ ಅಧಿಕಾರ ಸ್ವೀಕರಿಸಿ ೪೦ನೇ ವರ್ಷಾಚರಣೆ ನಿಮಿತ್ತ ಧಾರ್ಮಿಕ ಪ್ರವಚನ ಆಯೋಜಿಸಲಾಗಿದೆ.
ಶ್ರೀ ಜಗದ್ಗುರು ಡಾ.ಸಾರಂಗಧÀರ ದೇಶಿಕೇಂದ್ರ ಸ್ವಾಮೀಜಿ ಪ್ರವಚನ ಉದ್ಘಾಟಿಸಲಿದ್ದಾರೆ. ಚೌಡಾಪುರಿ ಹಿರೇಮಠದ ಶ್ರೀ ಡಾ.ರಾಜಶೇಖರ ಶಿವಾಚಾರ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಂಸ್ಥಾನದ ೯ನೇ ಪೀಠಾಧಿಪತಿ ಶ್ರೀ ಚಿ.ದೊಡ್ಡಪ್ಪ ಅಪ್ಪ ಉಪಸ್ಥಿತರಿರಲಿದ್ದಾರೆ. ಕುಮಾರಿ ಶಿವಾನಿ, ಕುಮಾರಿ ಕೋಮಲ್ ಮತ್ತು ಕುಮಾರಿ ಮಹೇಶ್ವರಿ ವಿಶೇಷ ಪ್ರಾರ್ಥನಾ ಗೀತೆ ನುಡಿಯಲಿದ್ದಾರೆ.
ಆ.೧೦ರಂದು ದಕ್ಷಿಣ ಕನ್ನಡ ತಂಡದಿAದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ನಿತ್ಯ ಸಂಜೆ ೭ ರಿಂದ ೮ರವರೆಗೆ ಗರೂರಿನ ಶ್ರೀ ಶಿವಲಿಂಗ ಶಾಸ್ತಿçà ಅವರಿಂದ ಶರಣಬಸವೇಶ್ವರ ಪುರಾಣ ನಡೆಯಲಿದೆ. ರಾತ್ರಿ ೮ ರಿಂದ ೮.೩೦ರವರೆಗೆ ವಿವಿಧ ಕ್ಷೇತ್ರಗಳಲ್ಲಿ ಸಂಸ್ಥಾನದ ಕೊಡುಗೆ ಕುರಿತು ವಿಶೇಷ ಉಪನ್ಯಾಸ ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net