

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಶರಣಬಸವೇಶ್ವರ ಸಂಸ್ಥಾನದ ಕನ್ನಡ ಕೊಡುಗೆ ಅಪಾರ. ದಾಸೋಹದ ಜತೆಗೆ ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿಗೆ ಶ್ರಮಿಸಿದ ಶರಣರ ಸಂಸ್ಥಾನದಲ್ಲಿ ಕೆಲಸ ಮಾಡುವುದೇ ನಮ್ಮ ಪುಣ್ಯ ಎಂದು ಕುಲಸಚಿವ ಡಾ.ಅನಿಲಕುಮಾರ ಬಿಡವೆ ಹೇಳಿದರು.
ಶರಣಬಸವ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ಬುಧವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಹಾಗೂ ಪೂಜ್ಯ ಚಿ.ದೊಡ್ಡಪ್ಪ ಅಪ್ಪ ಜನ್ಮದಿನೋತ್ಸವದಲ್ಲಿ ಮಾತನಾಡಿ, ಚಿ.ಅಪ್ಪಾಜಿ ಕಾರ್ಯಕ್ರಮವೊಂದರಲ್ಲಿ ಗುಲಾಬಿ ದಳಗಳನ್ನು ಎತ್ತರಕ್ಕೆ ಸೇರಿಸಿ, ಅದು ಲಿಂಗವೆAದು ಹೇಳಿದ್ದರು. ಅವರಲ್ಲಿನ ಭಕ್ತಿಗೆ ಸಾಕ್ಷಿ ಆ ಘಟನೆ ಎಂದರು.
ವಿವಿ ಸಮಕುಲಪತಿ ಪ್ರೊ.ವಿ.ಡಿ.ಮೈತ್ರಿ ಮಾತನಾಡಿ, ಚಿರಂಜೀವಿ ದೊಡ್ಡಪ್ಪ ಅಪ್ಪಾರವರನ್ನು ನೋಡಿದರೆ ಲಿಂಗೈಕ್ಯ ಪೂಜ್ಯ ದೊಡ್ಡಪ್ಪ ಅಪ್ಪ ಅವರ ಮರುಜನ್ಮ ಎನಿಸುತ್ತದೆ ಎಂದರು.
ಕನ್ನಡ ವಿಭಾಗದ ಡಾ.ಸಾರಿಕಾದೇವಿ ಕಾಳಗಿ, ಕುಲಸಚಿವ ಡಾ.ಬಸವರಾಜ ಮಠಪತಿ, ಡೀನ್ ಡಾ.ಲಕ್ಷಿ ಪಾಟೀಲ್ ಮಾಕಾ, ಡಾ.ಕಲ್ಯಾಣರಾವ್ ಪಾಟೀಲ್ ಇತರರಿದ್ದರು. ಪ್ರೊ.ಚನ್ನಮ್ಮ ನಿರೂಪಣೆ ಮಾಡಿದರು. ಪ್ರೊ. ಪ್ರಭಾವತಿ ವಂದಿಸಿದರು.