ಶರಣ ಸಂಸ್ಕೃತಿ ಉತ್ಸವ 3ರಿಂದ

Oplus_0
 ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದಲ್ಲಿ ಭಾನುವಾರ ಲಿಂ. ಬಸವಕುಮಾರ ಶಿವಯೋಗಿಗಳ ೪೯ನೇ ಪುಣ್ಯಸ್ಮಣೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವದ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಪೀಠಾಧಿಪತಿ ಶ್ರೀ ಡಾ.ಶಿವಾನಂದ ಸ್ವಾಮೀಜಿ ಮಾತನಾಡಿದರು. ಪ್ರಮುಖರಾದ ಮಲ್ಲಪ್ಪ ಧಬಾಲೆ, ಸುಧೀರ ಕಾಡಾದಿ, ಬಾಬುರಾವ ಗೌಂಡಗಾಂವೆ, ಗೋವಿಂದರಾವ ಸೋಮೊವಂಶಿ ಇತರರಿದ್ದರು.
Published on

ಹುಲಸೂರು: ಜನವರಿ ೩ ರಿಂದ ೧೧ರವರೆಗೆ ಗುರು ಬಸವೇಶ್ವರ ಪ್ರೌಢ ಶಾಲೆ ಆವರಣದಲ್ಲಿ ಶ್ರೀ ಬಸವಕುಮಾರ ಶಿವಯೋಗಿಗಳ ೪೯ನೇ ಪುಣ್ಯಸ್ಮರಣೋತ್ಸವ ಮತ್ತು ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮ ಅರ್ಥಪೂರ್ಣ ಮತ್ತು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಗುರು ಬಸವೇಶ್ವರ ಸಂಸ್ಥಾನದ ಮಠದ ಪೀಠಾಧಿಪತಿ ಶ್ರೀ ಡಾ.ಶಿವಾನಂದ ಸ್ವಾಮೀಜಿ ಹೇಳಿದರು.

ಗುರು ಬಸವೇಶ್ವರ ಸಂಸ್ಥಾನದ ಮಠದಲ್ಲಿ ಭಾನುವಾರ ನಡೆದ ಸ್ಮರಣೋತ್ಸವದ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶ್ರೀಗಳು, ಜ.೩ರಿಂದ ಜ.೧೧ರವರೆಗೆ ಪ್ರವಚನ, ಮೆರವಣಿಗೆ, ಪುಣ್ಯಸ್ಮಣೋತ್ಸವ, ಶರಣ ಸಂಸ್ಕೃತಿ ಉತ್ಸವ ಸೇರಿ ವಿವಿಧ ಕಾರ್ಯಕ್ರಮ ನಡೆಯಲಿದ್ದು, ಶ್ರೀ ನಿಜಗುಣಾನಂದ ಸ್ವಾಮೀಜಿ, ಮೈಸೂರಿನ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸುಧಾ ವರ್ಗೀಸ್, ವಿವಿಧ ಮಠಾಧೀಶರು, ಸಾಹಿತಿಗಳು, ಕಲಾವಿದರು, ಜನ ಪ್ರತಿನಿಧಿಗಳು, ರಾಜಕೀಯ ನಾಯಕರು ಆಗಮಿಸುತ್ತಿದ್ದಾರೆ ಎಂದು ಹೇಳಿದರು.

ಪ್ರಚಾರ, ಸ್ವಾಗತ, ವೇದಿಕೆ, ಪ್ರಸಾದ ಸಮಿತಿ ಮತ್ತು ವಿವಿಧ ಸಮಿತಿಗಳನ್ನು ರಚನೆ ಮಾಡಲಾಯಿತು.

ಜಿಪಂ ಮಾಜಿ ಸದಸ್ಯ ಮಲ್ಲಪ್ಪ ಧಬಾಲೆ ಮಾತನಾಡಿ, ಬಸವಕುಮಾರ ಶಿವಯೋಗಿಗಳು ಪವಾಡ ಪುರುಷರಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಜೀವನ ಸಾರ್ಥಕವಾಗುತ್ತದೆ. ಶ್ರೀಗಳ ಪುಣ್ಯಸ್ಮಣೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವ ಅದ್ದೂರಿಯಾಗಿ ಆಚರಿಸೋಣ ಎಂದರು.

ಸುಧಾ ವರ್ಗೀಸ್‌ಗೆ ಕಲ್ಯಾಣ ಬಸವಶ್ರೀ ಪ್ರಶಸ್ತಿ: ಸರ್ಕಾರದ ಯಾವುದೇ ಸಹಾಯ ಸಹಕಾರ ಪಡೆಯದೆ ಕಡು ಬಡತನದಲ್ಲಿ ಶಿಕ್ಷಣದಿಂದ ದೂರ ಉಳಿದ ಸಾವಿರಾರು ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ ಅವರಿಗೆ ದಾರಿ ದೀಪವಾಗಿರುವ ಸುಧಾ ವರ್ಗೀಸ್ ಅವರನ್ನು ಕಲ್ಯಾಣ ಬಸವ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಪ್ರಶಸ್ತಿ ಜತೆಗೆ ೫೦೦೦೦/- ರೂ. ನೀಡಿ ಗೌರವಿಸಲಾಗುವುದು ಎಂದು ಶ್ರೀಗಳು ಹೇಳಿದರು.

ಜಿಪಂ ಮಾಜಿ ಸದಸ್ಯ ಸುದೀರ ಕಾಡಾದಿ, ವಾಸು ಅಕಾಡೆಮಿ ಮುಖ್ಯಸ್ಥ ಮೋನೇಶ ಪಂಚಾಳ, ಸರ್ಕಾರಿ ವಕೀಲ ಬಾಲಾಜಿ ಆದೆಪ್ಪ, ಬಾಬುರಾವ ಗೌಂಡಗಾಂವೆ, ಶ್ರೀಮಂತರಾವ ಜಾನಬಾ, ಪ್ರೊ.ಆಕಾಶ ಖಂಡಾಳೆ, ರಾಜಕುಮಾರ ನೀಡೊದೆ ಮಾತನಾಡಿದರು.

ಪ್ರಮುಖರಾದ ಗೋವಿಂದರಾವ ಸೋಮೊವಂಶಿ, ರಾಮರಾವ ಮೋರೆ, ಚಂದ್ರಶೇಖರ ತೊಗರಗೆ, ಬಾಬುರಾವ ಮಲೋದೆ, ರಮೇಶ ಭೋಪಳೆ, ವೀರಯ್ಯ ಪತ್ರಿ, ಬಸವರಾಜ ಜಡೆಗೆ, ಶಿವಕುಮಾರ ಕಾಡಾದಿ, ಬಸವರಾಜ ಹಾರಕೂಡೆ, ಪ್ರವೀಣ ಕಾಡಾದಿ, ಜಗನ್ನಾಥ ಭೋಪಳೆ , ಸೋಮನಾಥ ನಂದಗೆ, ರಮಾಕಾಂತ ತೋಟದ, ಕಲ್ಯಾಣಿ ದಾನಾ, ನಟರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net