ಶರಣ ವಿಜಯೋತ್ಸವ, ನಾಡಹಬ್ಬ ಅ.3ರಿಂದ

bdr1
ಬಸವಕಲ್ಯಾಣದಲ್ಲಿ ಶನಿವಾರ ಕರೆದಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಮಾತನಾಡಿದರು. ರೇವಣಪ್ಪ ರಾಯವಾಡೆ, ಚನ್ನಪ್ಪ ಪ್ರತಾಪುರೆ, ಶಂಕರ ಕರಣೆ, ರವೀಂದ್ರ ಕೊಳಕೂರ, ಶಿವರಾಜ ನರಶೆಟ್ಟಿ, ಶಿವಾಜಿ ಕಾಂಬಳೆ, ಆಕಾಶ ಖಂಡಾಳೆ ಇದ್ದರು.
Published on

ಬಸವಕಲ್ಯಾಣ: ಕಲ್ಯಾಣ ಕ್ರಾಂತಿಯಲ್ಲಿ ಹುತಾತ್ಮ ಶರಣರ ಸ್ಮರಣೆಗಾಗಿ ಹರಳಯ್ಯ ಗವಿಯಲ್ಲಿ ಶರಣ ವಿಜಯೋತ್ಸವ, ನಾಡ ಹಬ್ಬ ಹುತಾತ್ಮ ದಿನಾಚರಣೆ ಅ.3ರಿಂದ 12ರವರೆಗೆ ಅರ್ಥಪೂರ್ಣವಾಗಿ ನಡೆಸಲು ನಿರ್ಧರಿಸಲಾಗಿದೆ ಎಂದು ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ತಿಳಿಸಿದರು.

ಹರಳಯ್ಯ ಗವಿಯಲ್ಲಿ ಶನಿವಾರ ಪೂರ್ವಭಾವಿ ಸಭೆ ನಡೆಸಿದ ಅವರು, ನಾಡಿನ ಅನುಭಾವಿಗಳು, ಪೂಜ್ಯರು, ಸಾಹಿತಿಗಳನ್ನು ಆಮಂತ್ರಿಸಿ ಪ್ರತಿದಿನ ಅನುಭಾವ, ವಚನ ನೃತ್ಯ, ವಚನ ಸಂಗೀತ, ಶರಣ ವಿಜಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸುವುದಾಗಿ ಹೇಳಿದರು.

ಹಿರಿಯ ನಾಗರಿಕರ ಒಕ್ಕೂಟದ ಅಧ್ಯಕ್ಷ ಚನ್ನಪ್ಪ ಪ್ರತಾಪುರೆ ಮಾತನಾಡಿ, ಕಾರ್ಯಕ್ರಮ ಅರ್ಥಪೂರ್ಣವಾಗಿ ಮಾಡಲು ಎಲ್ಲರೂ ಸಹಕರಿಸಬೇಕು ಎಂದು ಕೋರಿದರು. ಕಾರ್ಯದರ್ಶಿ ಶಂಕರ ಕರಣೆ ಮಾತನಾಡಿ, ಕಾರ್ಯಕ್ರಮದಲ್ಲಿ ವಿವಿಧ ಗೋಷ್ಠಿ ಜತೆಗೆ ಯುವಕರಿಗಾಗಿ ಪ್ರತ್ಯೇಕ ಗೋಷ್ಠಿ ಏರ್ಪಡಿಸಬೇಕು ಎಂದು ಸಲಹೆ ನೀಡಿದರು.

ಅಕ್ಕಮಹಾದೇವಿ ಗವಿ ಪೂಜ್ಯ ಸತ್ಯಕ್ಕತಾಯಿ ಪ್ರಾಸ್ತಾವಿಕ ಮಾತನಾಡಿದರು. ಬಿಡಿಪಿಸಿ ನಿರ್ದೇಶಕ ರೇವಣಪ್ಪ ರಾಯವಾಡೆ, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸವರಾಜ ತೊಂಡಾರೆ, ಹರಳಯ್ಯ ಸಮಾಜದ ಅಧ್ಯಕ್ಷ ಶಿವಾಜಿ ಕಾಂಬಳೆ, ಪ್ರಮುಖರಾದ ಶಿವರಾಜ ನರಶೆಟ್ಟಿ, ಆಕಾಶ ಖಂಡಾಳೆ, ಸಂಗಮೇಶ ಅವಸೆ, ಮಲ್ಲಿಕಾರ್ಜುನ ಪಾಟೀಲ್ ಮಂಠಾಳ, ಲಕ್ಷ್ಮೀಕಾಂತ ಜ್ಯಾಂತೆ, ಮಹಾದೇವ ಮಹಾಜನ್, ಗೌತಮ ಜಾಧವ್, ಗಣಪತಿ ಕಾಸ್ತೆ, ರವೀಂದ್ರ ಬೇಲೂರೆ, ಶಿವರಾಜ ನೀಲಕಂಠೆ, ಸುಲೋಚನಾ ಗುದಗೆ, ಲಕ್ಷ್ಮೀಬಾಯಿ ಪಾಟೀಲ್, ರಾಣಿ ವಡ್ಡೆ, ಸವಿತಾ ಆಲಗೂಡ, ಮಹಾನಂದ ಕಿರುಣಗೆ ಇತರರಿದ್ದರು. ರಾಷ್ಟ್ರೀಯ ಬಸವದಳ ತಾಲೂಕು ಅಧ್ಯಕ್ಷ ರವೀಂದ್ರ ಕೋಳಕೂರ ಸ್ವಾಗತಿಸಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net