ಶರಣ ಮೇಳದಲ್ಲಿ ಪಾಲ್ಗೊಂಡು ಕೃತಾರ್ಥರಾಗಿ

1111111111
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೂಡಲಸಂಗಮದಲ್ಲಿ 2023ರ ಜ. 12ರಿಂದ 14ರವರೆಗೆ 36ನೇ ಶರಣ ಮೇಳ ಜರುಗಲಿದೆ. ಅದರ ಅಂಗವಾಗಿ ನಗರದ ಕರ್ನಾಟಕ ವಿದ್ಯಾವರ್ಧಕ ಸಂದ ಸಭಾಭವನದಲ್ಲಿ ಪ್ರಚಾರಾರ್ಥ ಸಭೆ ಜರುಗಿತು.
ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಮಾತನಾಡಿ, ಲಿಂಗಾಯತರಿಗೆ ವಿಶ್ವಗುರು ಬಸವಣ್ಣನವರ ಐಕ್ಯಕ್ಷೇತ್ರ ಕೂಡಲಸಂಗಮವು ಪವಿತ್ರ ಸ್ಥಳವಾಗಿದೆ. ಪ್ರತಿಯೊಬ್ಬ ಬಸವಧರ್ಮ ಅನುಯಾಯಿ ಜೀವಮಾನದಲ್ಲಿ ಒಮ್ಮೆ ಕೂಡಲಸಂಗಮದಲ್ಲಿ ನಡೆಯುವ ಶರಣ ಮೇಳದಲ್ಲಿ ಪಾಲ್ಗೊಳ್ಳಬೇಕು. ಬಸವಧರ್ಮೀಯರು, ಲಿಂಗಾಯತರು ವರ್ಷಕ್ಕೊಮ್ಮೆಯಾದರೂ ಕೂಡಲಸಂಗಮಕ್ಕೆ ತೆರಳಿ ಗಣಲಿಂಗ ದರ್ಶನ ಪಡೆಯಬೇಕು. ಶರಣ ಮೇಳದಲ್ಲಿ ಸಾಮೂಹಿಕ ಪ್ರಾರ್ಥನೆ, ಲಿಂಗಪೂಜೆ, ಗಣಲಿಂಗ ದರ್ಶನ, ಧರ್ಮಚಿಂತನ ಗೋಷ್ಠಿ, ಧಾರ್ಮಿಕ ರಸಪ್ರಶ್ನೆ, ಪಥಸಂಚಲನ, ಉಪನ್ಯಾಸ ಜರುಗಲಿವೆ. ಭಕ್ತರಿಗೆ ವಸತಿ, ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಮಾರಂಭದಲ್ಲಿ ಶರಣ ಮೇಳದ ಬಿತ್ತಿಪತ್ರ ಬಿಡುಗಡೆ ಮಾಡಲಾತು. ಶ್ರೀ ಬಸವರತ್ನ ಮಾತಾಜಿ, ಶ್ರೀ ಅನಿಮಿಷಾನಂದ ಸ್ವಾಮೀಜಿ, ಎನ್.ವಿ. ಮೆಣಸಿನಕಾಯಿ, ಎಂ.ವಿ. ಕುಸುಗಲ್, ಎಸ್.ಎಲ್. ಎಮ್ಮಿ, ಬಸವಂತ ತೋಟದ, ಕೆ.ಎಸ್. ಕೋರಿಶೆಟ್ಟರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net