ಶರಣ ಪರಂಪರೆಯಲ್ಲಿ ಗುರುವಿಗಿದೆ ಶ್ರೇಷ್ಠ ಸ್ಥಾನ

ctd mmm
Published on

ಚಿತ್ರದುರ್ಗ: ಶರಣರ ಅನುಭವದ ಬದುಕು ಲಕ್ಷಾಂತರ ಜನರ ಅನ್ನ, ಜ್ಞಾನಮಯ ಬದುಕಿಗೆ ಕಾರಣವಾಗಿದೆ ಎಂದು ಕಡೂರಿನ ಡಾ.ಮಂಜುನಾಥ್ ಹೇಳಿದರು. ಶರಣ ಸಂಸ್ಕೃತಿ ಉತ್ಸವ ಹಾಗೂ ಶ್ರೀ ಜಯದೇವಶ್ರೀ 150ನೇ ಜಯಂತ್ಯುತ್ಸವದ ಅಂಗವಾಗಿ ಶನಿವಾರ ಮುರುಘಾ ಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿನ ವಚನ ಕಮ್ಮಟದಲ್ಲಿ ಮಾತನಾಡಿದರು.
ದೈವದ ಜತೆಗೆ ಕನ್ನಡವು ಮಾತನಾಡುತ್ತಿದೆ ಎಂದು ಶರಣರು ತೋರಿಸಿದ್ದಾರೆ. ವಿಶ್ವಗುರು ಬಸವಣ್ಣ ದಯವೇ ಧರ್ಮದ ಮೂಲವೆಂದು ಸಾರಿದ್ದಾರೆ. ಶರಣ ಪರಂಪರೆಯಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನವಿದೆ. ಇಷ್ಟಲಿಂಗ ಎನ್ನುವುದು ಆಚಾರದ ಪ್ರತೀಕ, ಅರಿವಿನ ಕುರುಹಾಗಿದೆ ಎಂದರು.
ಕೊಟ್ರೇಶ್ ಎಸ್. ಉಪ್ಪಾರ, ಬಸವಲಿಂಗಮೂರ್ತಿ ಶ್ರೀ, ಸಿದ್ದಬಸವ ಕಬೀರ ಶ್ರೀ, ಲತಾ ಮಾತನಾಡಿದರು.
ಕುಂಬಾರ ಗುಂಡಯ್ಯ ಶ್ರೀ, ಬಸವನಾಗೀದೇವ ಶ್ರೀ, ಮುರುಘರಾಜೇಂದ್ರ ಶ್ರೀ, ಕೃಷ್ಣಪ್ಪ ಇದ್ದರು. ಲಂಕೇಶ್ ಸ್ವಾಗತಿಸಿ, ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net