

ಭಾಲ್ಕಿ: ಬಸವಕಲ್ಯಾಣ ಕ್ಷೇತ್ರದ ಶಾಸಕ ಬಿ.ನಾರಾಯಣರಾವ್ ಅವರು ನಮ್ಮ ಭಾಗದ ವಿಶೇಷವಾಗಿ ಬಸವಭಕ್ತರ ದೊಡ್ಡ ಸಂಪತ್ತಾಗಿದ್ದರು. ಸದಾ ವಚನಗಳ ಬಗ್ಗೆ, ಅನುಭವ ಮಂಟಪದ ನವ ನಿರ್ಮಾಣದ ಬಗ್ಗೆ ಮಾತನಾಡುತ್ತಿದ್ದರು ಎಂದು ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸ್ಮರಿಸಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಶಾಸಕ ಬಿ.ನಾರಾಯಣರಾವ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ, ಅನುಭವಮಂಟಪ ನಿರ್ಮಾಣದ ಕನಸು ಕಂಡಿದ್ದ ಶಾಸಕ ನಾರಾಯಣರಾವ್ ಅವರ ಕನಸನ್ನು ಸರ್ಕಾರ ಪೂರ್ಣಗೊಳಿಸಬೇಕು. ವಿಧಾನಸಭೆಯಲ್ಲಿ ಅನುಭವಮಂಟಪದ ಕುರಿತು ಘಂಟಾಘೋಷವಾಗಿ ಮಾತನಾಡುವ ಧೈರ್ಯ ಬಸವನಿಷ್ಠ ಜನಪ್ರತಿನಿಧಿಗಳಿಗೆ ನಾರಾಯಣರಾವ್ ಮಾದರಿ ಎಂದರು.
ಶ್ರೀ ಮಹಾಲಿಂಗ ಸ್ವಾಮೀಜಿ, ಶ್ರೀ ನಿರಂಜನ ಸ್ವಾಮೀಜಿ, ಶ್ರೀ ಬಸವಲಿಂಗ ಸ್ವಾಮೀಜಿ ಇತರರಿದ್ದರು