ಆಲೂರು: ತಾಲೂಕಿನ ಕೆ. ಹೊಸಕೋಟೆ ಹೋಬಳಿ ಹರಿಹಳ್ಳಿ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಕೆಂಚಾಂಬ ದೇವಸ್ಥಾನದ ದೊಡ್ಡ ಜಾತ್ರಾ(ಸುಗ್ಗಿ) ಮಹೋತ್ಸವ ಕಾರ್ಯಕ್ರಮವು ಮೇ 12ರಿಂದ ಆರಂಭವಾಗಿದ್ದು, ಮೇ 19ರವರೆಗೆ ನಡೆಯಲಿದೆ. ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಎಂದು ಶ್ರೀ ಕೆಂಚಾಂಬ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್.ಡಿ. ಗೋಪಾಲ್ (ರಘು) ತಿಳಿಸಿದರು.
ಹರಿಹಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ 48 ಗ್ರಾಮಗಳ ಅಧಿದೇವತೆಯಾಗಿರುವ ಕೆಂಚಾಂಬ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಬುಧವಾರ ದೇವಿಯ ಪಾದುಕ ಉಯ್ಯಲೆ ಜಾತ್ರೆ ನಡೆಯಿತು. 17ರಂದು ಉಕ್ಕಂದ ಪೂಜೆ, 18ರಂದು ಉದ್ಘಾರ್ಚನೆ, ಸಪ್ತಮಾತೃಕಾಲಾಂಕಾರ ಜಾತ್ರಾ ಸುಗ್ಗಿ, 19ರಂದು ದೊಡ್ಡ ಜಾತ್ರೆ ಹಾಗೂ ಉತ್ಸವಾದಿಗಳು ನಡೆಯಲಿವೆ. ಮೇ 20 ರ ಸೋಮವಾರದಿಂದ 25 ರ ಶನಿವಾರದವರೆಗೆ ದೇವಸ್ಥಾನದ ಬಾಗಿಲು ತೆರೆಯುವುದಿಲ್ಲ. 26 ರಂದು ದೇವಸ್ಥಾನದ ಬಾಗಿಲು ತೆರೆಯುವ ಜಾತ್ರೆ ನಡೆಯಲಿದ್ದು, ಈ ಎಲ್ಲ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದರು.
ಶ್ರೀ ಕೆಂಚಾಂಬಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಾರಾಯಣ್ ಶರ್ಮ, ಎಚ್.ಎಂ.ಸಿದ್ದಬಸವೇಗೌಡ, ದಾಸೋಹ ಸಮಿತಿ ಸದಸ್ಯ ಮಧುಕುಮಾರ್ ಇದ್ದರು.