ಶಮೀ ವೃಕ್ಷಕ್ಕೆ ಪೂಜೆ

ydg5
ಕೆಂಭಾವಿಯ ಭೋಗೇಶ್ವರ ದೇವಸ್ಥಾನದಲ್ಲಿ ವಿಜಯದಶಮಿ ನಿಮಿತ್ತ ಶನಿವಾರ ಸಂಪ್ರದಾಯದAತೆ ಜನತೆ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದ ನಂತರ ಹಳ್ಳೇರಾವ ಕುಲಕರ್ಣಿ ಬನ್ನಿಪತ್ರ ಓದಿದರು. ಮುದಿಗೌಡ ಮಾಲಿಪಾಟೀಲ, ಮಲಕನಗೌಡ ಪೊಲೀಸ್ ಪಾಟೀಲ, ಭೀಮಾಚಾರ್ಯ ಜೋಶಿ ಇದ್ದರು.
Published on

ಕೆಂಭಾವಿ: ವಿಜಯದಶಮಿ ಹಬ್ಬವನ್ನು ಪಟ್ಟಣದಲ್ಲಿ ಶನಿವರ ಸಂಭ್ರಮದಿAದ ಆಚರಿಸಲಾಯಿತು. ಸಂಜೆ ಹೊಸ ಬಟ್ಟೆ ಧರಿಸಿ ಚೌಡಿ ಕಟ್ಟೆಯಲ್ಲಿ ಸೇರಿದ ಜನತೆ ಮುಖ್ಯ ಬಜಾರ್ ಮುಖಾಂತರ ಇತಿಹಾಸಪ್ರಸಿದ್ಧ ಭೋಗೇಶ್ವರ ದೇವಸ್ಥಾನಕ್ಕೆ ತೆರಳಿ ಸಂಪ್ರದಾಯದAತೆ ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸಿ ಬನ್ನಿ ಮುಡಿದರು. ಇದಕ್ಕೂ ಮುನ್ನ ಊರಿನ ಪ್ರಮುಖರಾದ ಮಾಲಿಗೌಡರು, ಕುಲಕರ್ಣಿ, ಪೊಲೀಸ್ ಗೌಡರು, ಜೋಯಿಸರು ಜನರೊಂದಿಗೆ ಆಯುಧ, ಹೂವು, ಹಣ್ಣು, ಸುಗಂಧ ದ್ರವ್ಯಗಳಿಂದ ಶಮೀ ವೃಕ್ಷಕ್ಕೆ (ಬನ್ನಿಮರ) ಪೂಜೆ ಮಾಡಿದರು. ಮಂತ್ರ ಘೋಷಗಳೊಂದಿಗೆ ನರಸಿಂಹರಾವ ಕುಲಕರ್ಣಿ ಪೂಜೆ ಮುಗಿಸುತ್ತಿದ್ದಂತೆ ಹಳ್ಳೇರಾವ ಕುಲಕರ್ಣಿ ಬನ್ನಿ ಪತ್ರವನ್ನು ಓದಿದರು. ಎಲ್ಲರೂ ಬನ್ನಿ ವಿನಿಮಯ ಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net