ಶಬ್- ಎ- ಬಾರಾತ್ ಆಚರಣೆ

H9 Anjuman 2
Published on

ಹುಬ್ಬಳ್ಳಿ: ಲಾಕ್​ಡೌನ್ ಹಿನ್ನೆಲೆಯಲ್ಲಿ ಮುಸ್ಲಿಮರ ಶಬ್- ಎ- ಬಾರಾತ್ (ಪೂರ್ವಜರ ಮೋಕ್ಷಕಕ್ಕಾಗಿ ಪ್ರಾರ್ಥಿಸುವ) ಅನ್ನು ಅಂಜುಮನ್ ಸಂಸ್ಥೆ ವತಿಯಿಂದ ಇಲ್ಲಿನ ಖಬರಸ್ತಾನ (ಸ್ಮಶಾನ)ದಲ್ಲಿ ಗುರುವಾರ ಸರಳವಾಗಿ ಆಚರಿಸಲಾಯಿತು. ಖಬರಸ್ತಾನ ಸ್ವಚ್ಛಗೊಳಿಸಿ, ಸುಣ್ಣಬಣ್ಣ ಬಳಿದು ಸಮಾಜ ಬಾಂಧವರ ಪರವಾಗಿ ಸಂಸ್ಥೆ ಅಧ್ಯಕ್ಷ ಯೂಸೂಫ ಸವಣೂರ ಪುಷ್ಪನಮನ ಸಲ್ಲಿಸಿದರು. ಉಪಾಧ್ಯಕ್ಷ ಅಲ್ತಾಫ್ ಕಿತ್ತೂರ, ಅಬ್ದುಲ್ ಮುನಾಫ್ ದೇವಗಿರಿ, ದಾದಾ ಹಯಾತ್ ಖೈರಾತಿ, ಮೌಲಾನಾ ಅಬ್ದುಲ್ ಹಜೀಜ್ ಪಾಲ್ಗೊಂಡಿದ್ದರು. ಲಾಕ್​ಡೌನ್ ಹಾಗೂ ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಯಾರೂ ಖಬರಸ್ತಾನಕ್ಕೆ ಬರಬಾರದು ಮತ್ತು ಮನೆಯಲ್ಲೇ ಪ್ರಾರ್ಥನೆ ಮಾಡಬೇಕು ಎಂದು ಅಂಜುಮನ್ ಸಂಸ್ಥೆ ಸಮಾಜ ಬಾಂಧವರಲ್ಲಿ ಮನವಿ ಮಾಡಿಕೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net