ಶನೇಶ್ವರಸ್ವಾಮಿ ದೇವರ ಉತ್ಸವ

ಶನೇಶ್ವರಸ್ವಾಮಿ ದೇವರ ಉತ್ಸವ
Published on

ಅರಕಲಗೂಡು: ತಾಲೂಕಿನ ಪ್ರಸಿದ್ಧ ಶಿರಧನಹಳ್ಳಿ ಗ್ರಾಮದ ಶ್ರೀ ಶನೇಶ್ವರಸ್ವಾಮಿ ದೇವಸ್ಥಾನದ ಉತ್ಸವ ಶನಿವಾರ ಶಿವರಾತ್ರಿ ಪ್ರಯುಕ್ತ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.


ದೇವಸ್ಥಾನದಲ್ಲಿ ಭಕ್ತರ ಜಾತ್ರೆಯೇ ನೆರೆದಿತ್ತು. ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಸಲ್ಲಿಸಲಾಯಿತು. ದೇವರ ಉತ್ಸವ ಮೂರ್ತಿಯನ್ನು ಅಲಂಕೃತ ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಿ ರಾಮನಾಥಪುರ ಹಾಗೂ ಶಿರದನಹಳ್ಳಿ ಸುತ್ತಲಿನ ಗ್ರಾಮಗಳಲ್ಲಿ ಅದ್ದೂರಿ ಉತ್ಸವ ನಡೆಸಲಾಯಿತು. ಉತ್ಸವದ ವೇಳೆ ಭಕ್ತರು ಪೂಜಾ ಕುಣಿತ ಪ್ರದರ್ಶಿಸಿ ಭಕ್ತಿ ಭಾವ ಮೆರೆದರು.


ದೇವಸ್ಥಾನದಲ್ಲಿ ಭಕ್ತರು ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಪುನೀತರಾದರು. ಗ್ರಾಮದಲ್ಲಿ ಸಡಗರ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net