

ಶನಿವಾರಸಂತೆ: ಸುಷ್ಮಿತಾ- ಗಿರೀಶ್ ಕ್ರಿಯೇಷನ್ ನಿರ್ಮಾಣದ ಅಕ್ಷರ ಕನ್ನಡ ಚಲನಚಿತ್ರದ ಚಿತ್ರೀಕರಣ ಹೋಬಳಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಭರದಿಂದ ಸಾಗಿದೆ. ಪಟ್ಟಣದ ಕೆಆರ್‌ಸಿ ವೃತ್ತದಲ್ಲಿ ಕೆಲವು ಸನ್ನಿವೇಶಗಳನ್ನು ಚಿತ್ರೀಕರಿಸಲಾಯಿತು. ಬಿ.ಕಿಶೋರ್‌ಕುಮಾರ್ ನಿರ್ಮಾಣದ ಈ ಚಿತ್ರವನ್ನು ಎಸ್.ನರೇಂದ್ರ ಬಾಬು ನಿರ್ದೇಶಿಸುತ್ತಿದ್ದಾರೆ. ಜೀವಾ ಅಂಟೋನಿ ಛಾಯಾಗ್ರಹಣ ಮತ್ತು ಆನಂದ್ ರಾಜ್- ವಿಕ್ರಮ್ ಸಂಗೀತ ನಿರ್ದೇಶನವಿದೆ. ನಾಯಕ ನಟನಾಗಿ ಭುವನ್‌ಚಂದ್ರ, ನಾಯಕಿಯಾಗಿ ಆಲ್ಮಸ್ ಮೋಬಿವಾಲ, ಖಳನಾಯಕನಾಗಿ ಶನಿವಾರಸಂತೆಯ ಧನುಷ್ ಗೌಡ ನಟಿಸುತ್ತಿದ್ದಾರೆ.