ಶನಿವಾರಸಂತೆಯ ವಿವಿಧೆಡೆ ರಾಜ್ಯೋತ್ಸವ

1ss1s sante auto rajyotsava
Published on

ಶನಿವಾರಸಂತೆ: ಶನಿವಾರಸಂತೆಯ ವಿವಿಧೆಡೆ 67ನೇ ಕನ್ನಡ ರಾಜ್ಯೋತ್ಸವವನ್ನು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು.


ವಿಘ್ನೇಶ್ವರ ಆಟೋ ಚಾಲಕರ ಸಂಘದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಫರ್ಜಾನ್ ಶಾಹಿದ್ ಖಾನ್ ಕನ್ನಡ ಧ್ವಜರೋಹಣ ನೆರವೇರಿಸಿದರು. ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಹರೀಶ್ ಉಪನ್ಯಾಸ ನೀಡಿದರು. ಗ್ರಾಪಂ ಉಪಾಧ್ಯಕ್ಷ ಎಸ್.ಆರ್.ಮಧು, ಎಸ್.ಸಿ.ಶರತ್‌ಶೇಖರ್, ಎಸ್.ಎನ್.ರಘು, ಆದಿತ್ಯಗೌಡ, ಸರೋಜಾ ಶೇಖರ್, ಕಸಾಪ ಹೋಬಳಿ ಅಧ್ಯಕ್ಷ ಬಿ.ಬಿ.ನಾಗರಾಜ್, ವರ್ತಕರಾದ ಶ್ರೀನಿವಾಸ್, ನವೀನ್, ರಾಜಶೇಖರ್, ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು. ಸೆಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.


ದುಂಡಳ್ಳಿ ಗ್ರಾಪಂ: ದುಂಡಳ್ಳಿ ಗ್ರಾಪಂನಲ್ಲಿ ಕನ್ನಡ ಧ್ವಜಾರೋಹಣವನ್ನು ಅಧ್ಯಕ್ಷೆ ಪೂರ್ಣಿಮಾ ಕಿರಣ್ ನೆರವೇರಿಸಿದರು. ಉಪಾಧ್ಯಕ್ಷ ನಿತಿನ್, ಸದಸ್ಯರಾದ ಸಿ.ಜೆ.ಗಿರೀಶ್, ಎಸ್.ಪಿ.ಭಾಗ್ಯ, ಮಹಾಂತೇಶ್, ಜಾನಕಿ, ಸತ್ಯವತಿ, ದೇವರಾಜ್, ಎಂ.ಡಿ.ಗೋಪಿಕಾ, ಪಿಡಿಒ ರಾಜೇಂದ್ರ, ಗ್ರಂಥಾಲಯ ಮೇಲ್ವಿಚಾರಕಿ ಎಸ್.ಪಿ.ದಿವ್ಯಾ, ತಮ್ಮಯ್ಯ, ಅಂಗನವಾಡಿ ಶಿಕ್ಷಕಿ ಅಶ್ವಿನಿ, ಜಯಮ್ಮ ಹಾಜರಿದ್ದರು.


ಪ್ರಾಥಮಿಕ ಶಾಲೆ: ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಧ್ವಜಾರೋಹಣವನ್ನು ಎಸ್‌ಡಿಎಂಸಿ ಅಧ್ಯಕ್ಷೆ ಬಿಂದು ಸುರೇಶ್ ನೆರವೇರಿಸಿದರು. ಮುಳ್ಳೂರು ಜಂಕ್ಸನ್‌ವರೆಗೆ ಮೆರವಣಿಗೆ ತೆರಳಿ ಅರಳಿ ಕಟ್ಟೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ನಿಡ್ತ ಗ್ರಾಪಂ ಸದಸ್ಯ ಹರೀಶ್, ಮಕ್ಕಳ ಸಹಾಯವಾಣಿ ಕೇಂದ್ರದ ಕುಮಾರಿ, ಶಾಲಾ ಮುಖ್ಯ ಶಿಕ್ಷಕ ಸಿ.ಎಸ್.ಸತೀಶ್, ಶಿಕ್ಷಕಿ ನವ್ಯಾ, ಪಾಲಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net