

ಅರಕಲಗೂಡು: ತಾಲೂಕಿನ ಕೂಡಲೂರು ಗ್ರಾಮದಲ್ಲಿ ಶ್ರೀ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಬುಧವಾರ ರಾತ್ರಿ ರಾಜಾ ಸತ್ಯವ್ರತ ಅಥವಾ ಶನಿಪ್ರಭಾವ ಪೌರಾಣಿಕ ನಾಟಕ ನಡೆಯಿತು.
ನಾಟಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಮುಖಂಡರಾದ ಡಾ. ದಿನೇಶ್ ಭೈರೇಗೌಡ ಹಾಗೂ ಎಂ.ಟಿ. ಕೃ?್ಣೇಗೌಡ ಅವರು ಪೌರಾಣಿಕ ನಾಟಕದ ಮಹತ್ವ ಕುರಿತು ಮಾತನಾಡಿದರು.
ರಾಮನಾಥಪುರ ಗ್ರಾಪಂ ಅಧ್ಯಕ್ಷೆ ಮಂಜುಳಾ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ಮುಖಂಡರಾದ ರಾಮೇಗೌಡ, ವೆಂಕಟೇಶ್, ಕೊಣನೂರು ಗ್ರಾಪಂ ಸದಸ್ಯ ಕೆ.ಕೆ. ನಾಗರಾಜು ಇತರರಿದ್ದರು.
22ಎಆರ್‌ಕೆ2..