ಶನೈಶ್ಚರಸ್ವಾಮಿ ದೇಗುಲ ವಿಮಾನಗೋಪುರ, ಕಲಶ ಪ್ರತಿಷ್ಠಾಪನೆ

14-pnp 2
ಪಾಂಡವಪುರ ಪಟ್ಟಣದ ಮಹಾಕಾಳೇಶ್ವರಿ ಬಡಾವಣೆಯಲ್ಲಿರುವ ಶ್ರೀ ಧರ್ಮಶನೈಶ್ಚರಸ್ವಾಮಿ ದೇವಸ್ಥಾನದ ನೂತನ ವಿಮಾನ ಗೋಪುರ ಕಲಶ ಪ್ರತಿಷ್ಠಾಪನೆ ಶ್ರದ್ಧಾ ಭಕ್ತಿಯಿಂದ ವಿಜೃಂಭಣೆಯಾಗಿ ಜರುಗಿತು.
Published on

ಪಾಂಡವಪುರ : ಪಟ್ಟಣದ ಮಹಾಕಾಳೇಶ್ವರಿ ಬಡಾವಣೆಯಲ್ಲಿರುವ ಶ್ರೀ ಧರ್ಮ ಶನೈಶ್ಚರಸ್ವಾಮಿ ದೇವಸ್ಥಾನದ ನೂತನ ವಿಮಾನ ಗೋಪುರ ಕಲಶ ಪ್ರತಿಷ್ಠಾಪನೆ, ಸೂರ್ಯನಾರಾಯಣ ಮತ್ತು ಛಾಯಾದೇವಿ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ವಿವಿಧ ಹೋಮ, ಹವನ ಹಾಗೂ ಪೂಜಾ ಕೈಂಕರ್ಯಗಳೊಂದಿಗೆ ಬುಧವಾರ ವಿಜೃಂಭಣೆಯಿಂದ ನಡೆಯಿತು.

ಧರ್ಮ ಶನೈಶ್ಚರಸ್ವಾಮಿ ದೇವಸ್ಥಾನ ಜೀರ್ಣೊದ್ಧಾರದ ದಾನಿಗಳಾದ ಅರುಣಾಕ್ಷಿ ಮತ್ತು ಆರ್.ಗೋಪಾಲ್ ಹಾಗೂ ಅನಸೂಯಮ್ಮ ಮತ್ತು ಮುನಿರಾಮಯ್ಯ ದಂಪತಿಗಳ ನೇತೃತ್ವದಲ್ಲಿ ಬುಧವಾರ ವಿಮಾನಗೋಪುರದ ಕಲಶ ಪ್ರತಿಷ್ಠಾಪನೆ ನಡೆಯಿತು. ಇದಕ್ಕೂ ಮುನ್ನ ಶ್ರೀ ಗಣಪತಿ ಪೂಜೆ, ಅನುಜ್ಞೆ ಸ್ವಸ್ತಿವಾಚನ, ಗಂಗೆಪೂಜೆ, ಪುಣ್ಯಾಹ, ಋತ್ವಿಗಾವರಣ, ಕಂಕಣಪೂಜೆ-ರಕ್ಷಾಬಂಧನ, ಮೃತ್ಯುಂಗ್ರಹಣ, ಅಂಕುರಾರ್ಪಣೆ, ಪ್ರಧಾನ ಕುಂಭಾರಾಧನೆ, ಪಂಚಗವ್ಯ ಸಂಪನ, ಬಿಂಬ ಶುದ್ಧಿ, ಕಳಶ ಪ್ರತಿಷ್ಠಾಪನೆ, ಗಣಪತಿ ಹೋಮ, ಅಷ್ಠಾಧಿಕಾಲ್ಪಕ ಹೋಮ, ವಾಸ್ತು ರಾಕ್ಷೋಘ್ನ, ಪರಿವಾರ ಹೋಮ, ಸ್ಪುರ ಪ್ರಸ್ಪುರ ಹೋಮ ಹಾಗೂ ಬಲಿ ಲಘು ಪೂರ್ಣಾಹುತಿ ಸೇರಿದಂತೆ ಶನೈಶ್ಚರಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು ಶ್ರದ್ಧಾ ಭಕ್ತಿಯಿಂದ ಜರುಗಿದವು.

ಗುರುವಾರ ಛಾಯಾದೇವಿ, ಸೂರ್ಯನಾರಾಯಣಸ್ವಾಮಿ ಸ್ಥಿರಬಿಂಬ ಪ್ರತಿಷ್ಠಾಪನೆ: ಆ.15ರಂದು ಬೆಳಗಿನ ಜಾವ 5.50 ರಿಂದ 6.20 ರವರೆಗಿನ ಕುಂಭ ಲಗ್ನದಲ್ಲಿ ಶ್ರೀಛಾಯಾದೇವಿ ಹಾಗೂ ಬೆಳಗ್ಗೆ 6.32 ರಿಂದ 7.15 ರ ಸಿಂಹ ಲಗ್ನದಲ್ಲಿ ಶ್ರೀ ಸೂರ್ಯನಾರಾಯಣಸ್ವಾಮಿ ಸ್ಥಿರಬಿಂಬ ಪ್ರತಿಷ್ಠಾಪನೆಯ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಜರುಗಲಿದೆ. ಅಂದು ಕುಂಭಾರಾಧನೆ, ಗಣಪತಿ ಹೋಮ, ನ್ಯಾಸ ಹೋಮ, ಪ್ರಾಣ ಪ್ರತಿಷ್ಠಾ ಹೋಮಗಳು, ತತ್ವನ್ಯಾಸ ಹೋಮ, ನಯನೋನ್ಮಿಲ, ಮೂಲ ಮೂರ್ತಿ ಹೋಮ, ಸೂರ್ಯನಾರಾಯಣ ಹೋಮ, ಗ್ರಾಮ ದೇವತಾ ಹೋಮ, ಧರ್ಮಶನೈಶ್ಚರಸ್ವಾಮಿಗೆ ತಿಲಜ್ಯ ಹೋಮ, ಹೋಮಕುಂಡ ಬಲಿಪ್ರಧಾನ, ಮಹಾಪೂರ್ಣಾಹುತಿ, ಗ್ರಾಮ ಪ್ರದಕ್ಷಿಣೆ, ಧರ್ಮಶನೈಶ್ಚರಸ್ವಾಮಿ ವಿಮಾನ ಗೋಪುರಕ್ಕೆ ಕುಂಭಾಭಿಷೇಕ, ಅಲಂಕಾರ, ಗೋಪೂಜೆ, ಗೋದರ್ಶನ, ಪಂಚಕನ್ಯೆಯರ ದರ್ಶನ, ದೀಪ ದರ್ಶನ, ಕದಲಿ ಛೇದನ, ಕೂಷ್ಮಾಂಡ ಛೇದನ, ದರ್ಪಣ ದರ್ಶನ, ಮಹಾಸಂಕಲ್ಪ, ಅಷ್ಠೋತ್ತರ, ಮಹಾನೈವೇದ್ಯ, ಅಷ್ಟಾವಧಾನ ಸೇವೆ, ರಾಜೋಪಚಾರಸೇವೆ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆಯಲಿದೆ. ಮಧ್ಯಾಹ್ನ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಶನೈಶ್ಚರಸ್ವಾಮಿ ಸೇವಾ ಸಮಿತಿ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net