ಶತ್ರುಗಳ ಮಣಿಸಿದ ನಮ್ಮ ಸೈನಿಕರು

web2
ಚಿಕ್ಕೋಡಿ ಪಟ್ಟಣದಲ್ಲಿ ಕಾರ್ಗಿಲ್ ವಿಜಯ ದಿವಸ ಅಂಗವಾಗಿ ಮೌನಾಚರಣೆ ಮೂಲಕ ವೀರಯೋಧರಿಗೆ ನಮನ ಸಲ್ಲಿಸಲಾಯಿತು. ಬಸಗೌಡಾ ನೇರ್ಲಿ, ಸಂಜು ಕವಟಗಿಮಠ, ರಾಜು ಸುಣಗಾರ, ನೇಮಗೌಡ ಪಾಟೀಲ ಇತರರಿದ್ದರು.
Published on

ಚಿಕ್ಕೋಡಿ: ದೇಶದ ಗೌರವ ಮತ್ತು ಸ್ವಾಭಿಮಾನವನ್ನು ಕಾರ್ಗಿಲ್ ಯುದ್ಧ ಗೆಲ್ಲುವ ಮೂಲಕ ಭಾರತೀಯ ಸೈನಿಕರು ಹೆಚ್ಚಿಸಿದ್ದಾರೆ ಎಂದು ಪಿಎಸ್‌ಐ ಬಸಗೌಡ ನೇರ್ಲಿ ಹೇಳಿದರು.

ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹುತಾತ್ಮ ಚೌಕನಲ್ಲಿ ರಾಷ್ಟ್ರೀಯ ಮಾಜಿ ಸೈನಿಕ ಸಮನ್ವಯ ಸಮಿತಿ ಚಿಕ್ಕೋಡಿ ವತಿಯಿಂದ ಬುಧವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ ಆಚರಣೆಯಲ್ಲಿ ವೀರಯೋಧರಿಗೆ ನಮನ ಸಲ್ಲಿಸಿ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಶತ್ರುಗಳ ಹುಟ್ಟಡಗಿಸಿ ಸಿಯಾಚಿನ್ ಕಣಿವೆಯನ್ನು ಮರಳಿ ವಶಕ್ಕೆ ಪಡೆಯಿತು ಎಂದರು.

ಪುರಸಭೆ ಸದಸ್ಯ ಸಂಜು ಕವಟಗಿಮಠ, ರಾಜು ಸುಣಗಾರ, ನೇಮಗೌಡ ಪಾಟೀಲ, ತಿಪ್ಪಣ್ಣ ಗಾರಗುಟಿ, ರಾಜೇಂದ್ರ ಚೌಗಲಾ, ಮಾರುತಿ ಕೆಂಚನ್ನವರ, ಅಶೋಕ ಮುರಚಿಟ್ಟಿ, ಕಲ್ಲಪ್ಪ ವಠಾರೆ, ಸುಧಾಕರ ಬೆಡಗಿ, ಮಹಾಲಿಂಗ ಹಂಜಿ, ಅಣ್ಣಪ್ಪ ಗಿಡಹಳ್ಳಿ, ಶಂಕರ ರೋಗೆ, ಅಜಿತ ಸಂಗ್ರೋಳೆ, ರಮೇಶ ಬಸ್ತವಾಡೆ ಮಾಜಿ ಸೈನಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net