ಶತಮಾನದ ಶಾಲೆಗೆ ಇನ್ಫೋಸಿಸ್ ಸಹಕಾರ

30mlk01
ಮೇಲುಕೋಟೆಯ ಬಾಲಕರ ಶಾಲೆಯಲ್ಲಿ ಇನ್ಫೊಸಿಸ್ ಫೌಂಡೇಶನ್ ವತಿಯಿಂದ ಶಾಲಾಮಕ್ಕಳಿಗೆ ನೋಟ್ ಪುಸ್ತಕ ವಿತರಿಸಲಾಯಿತು. ಕೀರ್ತಿರಾಜ್, ಕನಗೋನಹಳ್ಳಿ ಪರಮೇಶ್ ಗೌಡ,ಮನೋಜ್ ಪಾಟೀಲ್, ಎಸ್.ಎಸ್. ಪಾಟೀಲ್, ನ್ಯಾಮನಹಳ್ಳಿ ಅಶ್ವಥ್ ಕುಮಾರಗೌಡ ಇತರರಿದ್ದರು.
Published on

ಮೇಲುಕೋಟೆ: 150 ವರ್ಷಕ್ಕೆ ಪದಾರ್ಪಣೆ ಮಾಡಿರುವ ಶತಮಾನದ ಸರ್ಕಾರಿ ಶಾಲೆಯ ಬಲವರ್ಧನೆಗೆ ಸಹ ಕಾರ ನೀಡಲಾಗುತ್ತದೆ ಎಂದು ಇನ್ಫೋಸಿಸ್ ಫೌಂಡೇ ಶನ್ ಪ್ರತಿನಿಧಿ ಕೀರ್ತಿರಾಜ್ ಭರವಸೆ ನೀಡಿದರು.

ಮೇಲುಕೋಟೆಯ ಬಾಲಕರ ಶಾಲೆಯಲ್ಲಿ ಶನಿವಾರ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಶಾಲಾಮಕ್ಕಳಿಗೆ ನೋಟ್ ಪುಸ್ತಕ ವಿತರಿಸಿ ಮಾತನಾಡಿದರು. ಶತಮಾನದ ಶಾಲೆಗೆ ಕಂಪ್ಯೂಟರ್ ಹಾಗೂ ಗ್ರಂಥಾಲಯಕ್ಕೆ ಪುಸ್ತಕಗಳು ಹಾಗೂ ವಿಜ್ಞಾನ ಪ್ರಯೋಗಾಲಯಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಡಲಾಗು ತ್ತದೆ. ಶಾಲೆಯಲ್ಲಿ ಈ ವರ್ಷ ಹಮ್ಮಿ ಕೊಳ್ಳುವ 150ನೇ ವರ್ಷದ ಸಮಾರಂಭದ ಯಶಸ್ಸಿಗೂ ಸಹಕಾರ ನೀಡಲಾಗುತ್ತದೆ ಎಂದರು.

ಶಾಲೆಯ ವಾತಾವರಣ ಮಕ್ಕಳ ಮನೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಕೀರ್ತಿರಾಜ್, ಸುಸಜ್ಜಿತವಾಗಿ ರುವ ಸರ್ಕಾರಿ ಶಾಲೆಯ ಸೌಲಭ್ಯವನ್ನು ಪಾಲಕರು ಬಳಸಿಕೊಳ್ಳಬೇಕು. ಮೇಲುಕೋಟೆಯ ಶತಮಾನದ ಶಾಲೆ ಹಾಗೂ ನ್ಯಾಮನಹಳ್ಳಿಯ ಕಿರಿಯ ಪ್ರಾಥಮಿಕ ಶಾಲೆ ಮಾದರಿಯಾಗಿದ್ದನ್ನು ಗಮನಿಸಿದ್ದೇನೆ ಈ ಶಾಲೆಗಳಿಗೆ ಸಹಕಾರ ನೀಡುತ್ತೇವೆ ಎಂದರು.

ಮುಖ್ಯ ಶಿಕ್ಷಕ ಸಂತಾನರಾಮನ್ ಮಾತನಾಡಿ, ಶತಮಾನದ ಶಾಲೆಗೆ ಊಟದ ಹಾಲ್ ಮಕ್ಕಳ ಮನೆಗೆ ಕಿಂಡರ್ ಗಾರ್ಟನ್ ನಿರ್ಮಿಸಿಕೊಡುವ ಜತೆಗೆ ಶಾಲೆಯ 150ನೇ ವರ್ಷದ ಸಮಾರಂಭಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಇನ್ಫೋಸಿಸ್ ಫೌಂಡೇಶನ್ ಕೀರ್ತಿರಾಜ್ ಒಪ್ಪಿಗೆ ಸೂಚಿಸಿದರು.

ಹಿರಿಯ ವಿದ್ಯಾರ್ಥಿ ಹಾಗೂ ಸಮಾಜ ಸೇವಕ ಕನಗೋನಹಳ್ಳಿ ಪರಮೇಶ್ ಗೌಡ ಮಾತನಾಡಿದರು. ಇದೇ ವೇಳೆ ಕ್ಯಾತನಹಳ್ಳಿ ಸರ್ಕಾರಿ ಪ್ರಾಥಮಿಕಶಾಲೆ, ಮೇಲುಕೋಟೆ ಬಾಲಕಿಯರ ಶಾಲೆ, ಹೋಬಳಿಯ ಬಳಘಟ್ಟ, ಕನಗೋನಹಳ್ಳಿ ಪಗಡೇಕಲ್ಲಹಳ್ಳಿ, ಕದಲಗೆರೆ ಕಾಡೇನಹಳ್ಳಿ, ಜಕ್ಕನಹಳ್ಳಿ ಕಜ್ಜಿಕೊಪ್ಪಲು, ನ್ಯಾಮನಹಳ್ಳಿ ಶಾಲೆಗಳ ಮಕ್ಕಳಿಗೆ ನೋಟ್‌ಬುಕ್ ವಿತರಿಸಲಾಯಿತು.

ಇನ್ಫೋಸಿಸ್ ಫೌಂಡೇಶನ್‌ನ ಮನೋಜ್ ಪಾಟೀಲ್, ಎಸ್.ಎಸ್. ಪಾಟೀಲ್, ನ್ಯಾಮನಹಳ್ಳಿ ಅಶ್ವಥ್ ಕುಮಾರ ಗೌಡ, ಚಂದ್ರಶೇಖರ್, ಜಯ ಬೋರೇಗೌಡ, ಅರುಣ, ಆಂಬುಲೆನ್ಸ್ ಚಂದ್ರು, ಯೋಗಿ ಚಲುವನಾರಾಯಣ, ಗಂಗಾಧರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net