

ಅಥಣಿ: ಪಂಚಭೂತಗಳಿಂದ ಕೂಡಿದ ಜಗತ್ತಿನಲ್ಲಿ ಸಕಲ ಜೀವರಾಶಿಗಳ ಒಳಿತಿಗಾಗಿ ಮತ್ತು ಲೋಕಕಲ್ಯಾಣಕ್ಕಾಗಿ ಮಾಡುವ ಶತಚಂಡಿಕಾಯಾಗದಿಂದ ಎಲ್ಲ ಸಂಕಷ್ಟಗಳು ದೂರವಾಗುತ್ತವೆ ಎಂದು ಉಡುಪಿ ಕಟಪಾಡಿ ಆನೆಗುಂದಿ ಮಹಾಸಂಸ್ಥಾನ ಸರಸ್ವತಿಪೀಠದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
ಪಟ್ಟಣದ ವಿಶ್ವಕರ್ಮ ಸಮುದಾಯದ ಕಾಳಿಕಾದೇವಿಯ ೫೦ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಶತಚಂಡಿಕಾಯಾಗಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾಶಂಕರ ಸ್ವಾಮೀಜಿ, ಶ್ರೀಧರ ಶರ್ಮಾ, ಸಿದ್ದಯ್ಯ ಸ್ವಾಮೀಜಿ, ಪಡದಯ್ಯ ಸ್ವಾಮೀಜಿ, ನಾಗೇಂದ್ರ ಸ್ವಾಮೀಜಿ, ರಾಮಚಂದ್ರ ಸ್ವಾಮೀಜಿ, ಮಹೇಂದ್ರ ಸ್ವಾಮೀಜಿ, ವೀರರಾಘವ ಶರ್ಮಾ, ಸಂಜೀವ ಪತ್ತಾರ, ಮಹೇಶ ಪತ್ತಾರ, ಉದಯ ಸೊನಾರ, ಭರಮು ಬಡಿಗೇರ, ಚನ್ನಪ್ಪ ಬಡಿಗೇರ, ಅನೀಲ ಬಡಿಗೇರ, ಪಿ.ಬಿ.ಬಡಿಗೇರ, ಬಿ.ಆರ್.ಬಡಿಗೇರ, ರಮೇಶ ಬಡಿಗೇರ, ಸುರೇಶ ಬಡಿಗೇರ ಇತರರಿದ್ದರು.