ಶಗುಪ್ತಾ ಅಂಜುಮ್ಗೆ ಸನ್ಮಾನ

12sirsi6
Published on

ಶಿರಸಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಶಗುಪ್ತಾ ಅಂಜುಮ್ಳನ್ನು ಸಾಯಿಲೆ ತನ್ಸಿಮ್ ಸೌಹಾರ್ದ ಸಂಘ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಟಿಪ್ಪು ನಗರದ ಉರ್ದು ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಶಗುಪ್ತಾ ಜತೆಗೆ ಅವರ ಪಾಲಕರನ್ನೂ ಗೌರವಿಸುವ ಮೂಲಕ ಭವಿಷ್ಯದ ವಿದ್ಯಾಭ್ಯಾಸಕ್ಕಾಗಿ 25 ಸಾವಿರ ರೂ. ನಗದು ನೀಡಿ ಪುರಸ್ಕರಿಸಲಾಯಿತು.

ಸಂಘದ ಅಧ್ಯಕ್ಷ ಶಾಹಿದ್ ಎ ಶೇಖ್, ಖಜಾಂಚಿ ಮಹಮ್ಮದ್ ಲತಿಫ್, ಗೌರವಾಧ್ಯಕ್ಷ ಶೇಖ್ ಜನಾಬ್ ಹಾಗೂ ಪ್ರಮುಖರಾದ ತಬ್ರೇಖ್ ಶೇಖ್, ಇಮ್ತಿಯಾಜ್ ಸೈಯದ್, ಮುತಾಲಿಫ್ ತೋನ್ಸೆ, ಎಸ್‌ಡಿಎಂಸಿ ಅಧ್ಯಕ್ಷ ಕರೀಂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net