ಶಕ್ತಿದೇವತೆಗಳ ಕಾರ್ತಿಕೋತ್ಸವಕ್ಕೆ ಸಾಕ್ಷಿಯಾದ ಭಕ್ತಸಾಗರ

Ucchhangi Yallamma Devi 5
Published on

ಚಿತ್ರದುರ್ಗ: ಕೋಟೆನಗರಿಯ ಶಕ್ತಿದೇವತೆಗಳ ದೇಗುಲಗಳಲ್ಲಿ ಶುಕ್ರವಾರ ಕಡೇ ಕಾರ್ತಿಕ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.

ಏಕನಾಥಮ್ಮ, ಉಚ್ಚೆಂಗಮ್ಮ, ಬರಗೇರಮ್ಮ, ಬುರುಜನಹಟ್ಟಿಯ ಬನಶಂಕರಿ, ಪ್ರಶಾಂತನಗರದ ಚೌಡೇಶ್ವರಿ, ಮಾರಮ್ಮ ದೇವಿ ದೇಗುಲಗಳ ಆವರಣದಲ್ಲಿ ಸಾಲು-ಸಾಲಾಗಿ ಇಡಲಾಗಿದ್ದ ಸಾವಿರಾರು ದೀಪಗಳನ್ನು ಹಚ್ಚುವ, ಅದಕ್ಕೆ ಎಣ್ಣೆ ಸುರಿಯುವ ಮೂಲಕ ನೆರೆದಿದ್ದ ಭಕ್ತರು ಭಕ್ತಿ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net